ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಇಂದು ಎಲ್ಲ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸುತ್ತಿದೆ. ಕ್ರಮೇಣ ಉದ್ಯೋಗ ಕಡಿತಕ್ಕೂ ಕಾರಣವಾಗಿದೆ. ಎಐ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಈ ಆತಂಕದಲ್ಲೇ ಎಲ್ಲರೂ ಎಐ ಕಂಡರೆ ಹೆದರುವಂತಾಗಿದೆ.
2030ರ ವೇಳೆಗೆ ಎಐನಿಂದಾಗಿ ಶೇಕಡಾ 99ರಷ್ಟು ಉದ್ಯೋಗಿಗಳು ನಿರುದ್ಯೋಗಿಗಳಾಗಲಿದ್ದಾರೆ ಎಂದು ಹೊಸ ವರದಿಯೊಂದು ಹೇಳಿದೆ.
ಲೂಯಿಸ್‌ವಿಲ್ಲೆ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕ ರೋಮನ್ ಯಂಪೋಲ್ಸ್ಕಿ ಅವರ ಪ್ರಕಾರ, ಕೃತಕ ಬುದ್ಧಿಮತ್ತೆಯು 2030ರ ವೇಳೆಗೆ ಬಹುತೇಕ ಉದ್ಯೋಗಗಳನ್ನು ಕಬಳಿಸಲಿದೆ. ಪ್ರಪಂಚದಾದ್ಯಂತದ ಕಂಪನಿಗಳು ತಮ್ಮ ವೆಚ್ಚವನ್ನು ಕಡಿತಗೊಳಿಸಲು ಮತ್ತು ಆದಾಯವನ್ನು ಹೆಚ್ಚಿಸಲು ಎಐ ಬಳಕೆಗೆ ಒತ್ತು ನೀಡಲಾಗುತ್ತಿದೆ. ಇದೇ ಸಮಯದಲ್ಲಿ ಈ ಆತಂಕಕಾರಿ ವರದಿ ಎಚ್ಚರಿಕೆ ನೀಡಿದೆ.
ಜಾಗತಿಕವಾಗಿ ಅಂದಾಜು 300 ಮಿಲಿಯನ್ ಉದ್ಯೋಗಗಳು 2030ರೊಳಗೆ ಎಐ ಮಾದರಿಗಳಿಂದ ಹೋಗುವ ಸಾಧ್ಯತೆ ಇದೆ. ಕೋಡರ್‌ಗಳು ಮತ್ತು ಪ್ರಾಂಪ್ಟ್ ಎಂಜಿನಿಯರ್‌ಗಳು ಸಹ ಬಹುತೇಕ ಎಲ್ಲ ಉದ್ಯೋಗಗಳನ್ನು ಕಸಿದುಕೊಳ್ಳಬಹುದಾದ ಎಐನಿಂದ ಸುರಕ್ಷಿತ ಎಂದು ಹೇಳಲು ಸಾಧ್ಯವಿಲ್ಲ. ನಾವು ಹಿಂದೆಂದೂ ನೋಡಿರದ ಮಟ್ಟದ ನಿರುದ್ಯೋಗವನ್ನು ಹೊಂದಿರುವ ಜಗತ್ತನ್ನು ನಾವು ನೋಡುತ್ತಿದ್ದೇವೆ ಎಂದಿದ್ದಾರೆ.
ಎಜಿಐ ಬಂದ್ರೆ ಅಪಾಯ
ಆಗ ಶೇಕಡಾ 99ರಷ್ಟು ನಿರುದ್ಯೋಗ ಇರಲಿದೆ. 2027ರ ವೇಳೆಗೆ ಮಾನವನಂತಹ ಬುದ್ಧಿಮತ್ತೆ ಅಥವಾ ಕೃತಕ ಸಾಮಾನ್ಯ ಬುದ್ಧಿಮತ್ತೆ (ಎಜಿಐ) ಬರುವ ಸಾಧ್ಯತೆಯಿದೆ ಎಂದು ಅಂದಾಜಿಸಿದ್ದಾರೆ. ಈ ಎಜಿಐ ಬಂದ ಮೂರು ವರ್ಷಗಳ ನಂತರ ಎಐ ಉಪಕರಣಗಳು ಮತ್ತು ಹುಮನಾಯ್ಡ್ ರೋಬೋಟ್‌ಗಳು ಮನುಷ್ಯರನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಿ, ಉದ್ಯೋಗ ಮಾರುಕಟ್ಟೆ ಕುಸಿಯುತ್ತದೆ ಎಂದು ಎಚ್ಚರಿಸಿದ್ದಾರೆ.
ಇತ್ತೀಚಿನ ಪಾಡ್‌ಕಾಸ್ಟ್‌ನಲ್ಲಿ ರೋಮನ್ ಯಂಪೋಲ್ಸ್ಕಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಉದ್ಯೋಗವು ಆದಾಯ, ರಚನೆ, ಸ್ಥಾನಮಾನ ಮತ್ತು ಸಮುದಾಯವನ್ನು ಒದಗಿಸುತ್ತದೆ. ಆದರೆ ಉದ್ಯೋಗಗಳು ಕಣ್ಮರೆಯಾದರೆ ಇವುಗಳಿಗೆ ಭಾರೀ ಹೊಡೆತ ಎಂದಿದ್ದಾರೆ. ಎಲ್ಲ ಕೆಲಸಗಳು ಸ್ವಯಂಚಾಲಿತವಾಗುತ್ತವೆ, ನಂತರ ಯಾವುದೇ ಪ್ಲ್ಯಾನ್ ಬಿ ಇರುವುದಿಲ್ಲ. ನೀವು ಮರುತರಬೇತಿ ಪಡೆಯಲು ಸಾಧ್ಯವೂ ಇಲ್ಲ ಎಂದು ಎಚ್ಚರಿಸಿದ್ದಾರೆ.
ಹಿರಿಯ ಹುದ್ದೆಗಳಿಂದ ಹಿಡಿದು ಕೆಳಮಟ್ಟದವರೆಗೆ ಸದಸ್ಯರವರೆಗೆ ಶೇ 99 ಮಂದಿ ಉದ್ಯೋಗ ಕಳೆದುಕೊಳ್ಳಬಹುದು. ಈಗ ಕೆಲಸದ ನಷ್ಟದ ಜೊತೆಗೆ ಕಳೆದುಕೊಳ್ಳುವುದಕ್ಕೂ ಸಿದ್ಧರಾಗಬೇಕು ಎಂದು ತಜ್ಞರು ಸೂಚಿಸಿದ್ದಾರೆ. ಎಐ ತಂತ್ರಜ್ಞಾನ ಅಭಿವೃದ್ಧಿಯಿಂದ ಹಲವಾರು ಉದ್ಯೋಗಗಳು ಇಲ್ಲವಾಗಬಹುದು. ಇದನ್ನು ಎದುರಿಸಲು ಹೊಸ ಕೌಶಲ್ಯ, ವಿಶಿಷ್ಟ ಯೋಜನೆ, ಮತ್ತು ಬದಲಾವಣೆಗಳು ಅಗತ್ಯ ಎಂದಿದ್ದಾರೆ.




