ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಇಚ್ಲಂಗೋಡಿನ ಅಣೆಕಟ್ಟು ಸನಿಹದ ಕಾಡಿನೊಳಗೆ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಏಳು ಮಂದಿಯನ್ನು ವಶಕ್ಕೆ ತೆಗೆದುಕೊಂಡು ಜೂಜಿಗೆ ಬಳಸಿದ್ದರೆನ್ನಲಾದ ಒಂಬತ್ತು ಕೋಳಿ ಹಾಗೂ 2750ರೂ. ನಗದು ವಶಪಡಿಸಿಕೊಂಡಿದ್ದಾರೆ.
ಕಾಸರಗೋಡು ಕೂಡ್ಲು ನಿವಾಸಿ ಸಂತೋಷ್, ಕನ್ಯಾನ ನಿವಾಸಿ ದಿಲೀಪ್, ಮಜಿಬೈಲ್ ನಿವಾಸಿ ಸೀತಾರಾಮ ಶೆಟ್ಟಿ, ಬೇಕೂರು ನಿವಾಸಿ ಸಂತೋಷ್ ಶೆಟ್ಟಿ, ಪೈವಳಿಕೆ ನಿವಾಸಿ ಐತ್ತಪ್ಪ, ಬಾಯಾರುನಿವಾಸಿ ಕಿಶೋರ್, ಇಚ್ಲಂಗೋಡು ಸುಂದರ ಶೆಟ್ಟಿ ಬಂಧಿತರು. ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಕುಂಬಳೆ ಠಾಣೆ ಇನ್ಸ್‍ಪೆಕ್ಟರ್ ಹಾಗೂ ಎಸ್.ಐ ನೇತೃಋಥ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.

