ಬದಿಯಡ್ಕ: ಸಂಘಟನೆಯ ಸದಸ್ಯರೆಲ್ಲರೂ ಸದಾ ಕ್ರಿಯಾಶೀಲರಾಗಿದ್ದು ಪರಸ್ಪರ ನಿರಂತರ ಸಂಪರ್ಕದ ಮೂಲಕ ಸಂಘಟನೆಯನ್ನು ಜೀವಂತವಾಗಿರಿಸಿಕೊಳ್ಳಬೇಕು. ನಾವೆಲ್ಲರೂ ಸಂಘಟನೆಯನ್ನು ಬೆಳೆಸಲು ಸದಾ ಶ್ರಮಿಸೋಣ ಎಂದು ಕೆಎಸ್‍ಪಿಎಸ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಬಿ ನಾಗರಾಜ್ ಕರೆ ನೀಡಿದರು.
ಪೆರಡಾಲ ನವಜೀವನ ವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಕೇರಳ ರಾಜ್ಯ ಪೆನ್ಶನರ್ಸ್ ಸಂಘದ ಬದಿಯಡ್ಕ ಘಟಕದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬದಿಯಡ್ಕ ಘಟಕದ ಅಧ್ಯಕ್ಷ ಮೈರ್ಕಳ ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಸಮಿತಿಯ ಅಧ್ಯಕ್ಷ ಚಂದ್ರಶೇಖರ ರೈ ಮಾತನಾಡಿದರು. ಗೌರವಾಧ್ಯಕ್ಷ ಈಶ್ವರ ಭಟ್ ಪೆರ್ಮುಖ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಹೊಸದಾಗಿ ಸಂಘಟನೆಗೆ ಸೇರ್ಪಡೆಗೊಂಡ ಬಾಲಸುಬ್ರಹ್ಮಣ್ಯ ಮಧುರಕಾನನ ಮತ್ತು ಲಲಿತಾಕುಮಾರಿ ನೀರ್ಚಾಲು ಅವರನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು. 2025-26 ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೋಪಾಲಕೃಷ್ಣ ಭಟ್ ವಿದ್ಯಾಗಿರಿ ಅಧ್ಯಕ್ಷರಾಗಿ ಆಯ್ಕೆಯಾದರು. ಬದಿಯಡ್ಕ ಘಟಕದ ಕಾರ್ಯದರ್ಶಿ ವೆಂಕಟರಾಜ ಚಾಳೆತ್ತಡ್ಕ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಉದನೇಶವೀರ ಕಿಳಿಂಗಾರು ವಂದಿಸಿದರು.

.jpg)
