ಬದಿಯಡ್ಕ: ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಶ್ರೀಕೃಷ್ಣಾಷ್ಟಮಿ ಹಾಗೂ ಓಣಂ ಹಬ್ಬದ ಆಚರಣೆ ಶನಿವಾರ ನಡೆಯಿತು. ಈ ಸಂದರ್ಭದಲ್ಲಿ ಬದಿಯಡ್ಕದ ಉದ್ಯಮಿ ಗೋಪಾಲಕೃಷ್ಣ ಪೈ ಹಾಗೂ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹಿಂದಿ ಸಲಹಾ ಸಮಿತಿಯ ಸದಸ್ಯರಾಗಿ ನೇಮಕಗೊಂಡಿರುವ ಆಶ್ರಮದ ಸ್ಥಾಪಕ ಸದಸ್ಯೆ ಸವಿತಾ ಟೀಚರ್ ಇವರನ್ನು ಸನ್ಮಾನಿಸಲಾಯಿತು. ಶಿಶು ಮಂದಿರದ ಮಕ್ಕಳಿಂದ ಶ್ರೀಕೃಷ್ಣ ವೇಷ ಪ್ರದರ್ಶನ ನಡೆಯಿತು. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು. ಪುದುಕೋಳಿ ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಆಶ್ರಮದ ಪ್ರಧಾನ ಕಾರ್ಯದರ್ಶಿ ರಮೇಶ್ ಕಳೇರಿ ಸ್ವಾಗತಿಸಿ, ಬಾಲಕೃಷ್ಣ ಏಣಿಯರ್ಪು ವಂದಿಸಿದರು. ಭಾರತಿ ನಿರೂಪಿಸಿದರು. ಸ್ವಯಂಸೇವಕರಾಗಿ ಸುರೇಶ್ ಯಾದವ್ ವಿಶೇಷ ಸಹಕಾರ ನೀಡಿದರು.

.jpg)
