ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಎ.ಯು.ಪಿ ಶಾಲೆಯ ಸಂಚಾಲಕರಾಗಿ, ಅಧ್ಯಾಪಕರಾಗಿ ಮಿಂಜ ಪ್ರದೇಶದ ವಿದ್ಯಾಭ್ಯಾಸ ಕ್ಷೇತ್ರದ ದ್ರುವತಾರೆಯೆನಿಸಿಕೊಂಡ ದಿ.ಯಂ ರಾಮಕೃಷ್ಣ ರಾವ್ ಅವರ 20 ನೇ ಪುಣ್ಯತಿಥಿ ಸೆ. 27 ರಂದು ಶನಿವಾರ ಸಂಸ್ಮರಣೆ ಮತ್ತು ಸನ್ಮಾನ ಕಾರ್ಯಕ್ರಮಗಳೊಮದಿಗೆ ಶಾಲಾ ಸಭಾಂಗಣದಲ್ಲಿ ಜರಗಲಿರುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜಾರ್ಜ್ ಕ್ರಾಸ್ತಾ ಸಿ.ಎಚ್. ವಹಿಸುವರು. ಶಾಲಾ ಆಡಳಿತ ಸಲಹೆಗಾರ ಶ್ರೀಧರ್ ರಾವ್ ಆರ್.ಎಂ. ಪ್ರಾಸ್ತವಿಕ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ಮನೋ ವೈದ್ಯ ಹಾಗೂ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ಅಧ್ಯಕ್ಷ ಡಾ.ಕೆ ಎಸ್. ಕಾರಂತ ಹಾಗೂ ಬಿ.ಆರ್.ಸಿ ಮಂಜೇಶ್ವರ ಕ್ಷೇತ್ರಧಿಕಾರಿ ಸುಮಾದೇವಿ ಉಪಸ್ಥಿತರಿರುವರು. ಇದೇ ಸಂದರ್ಭ ಶಾಲಾ ಹಳೆ ವಿದ್ಯಾರ್ಥಿಗಳಾದ ಇಬ್ರಾಹಿಂ ಬಿ. ಹಾಗೂ ಬಿ. ಕಿಶೋರ್ ಕುಮಾರ್ ರೈ ಇವರನ್ನು ಗೌರವಿಸಲಾಗುವುದು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶಾಲಾ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಳಿಂದ ವೀರ ಚಂದ್ರಹಾಸ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ.

LATE.RAMAKRISHNA%20RAV.jpg)
