ಕುಂಬಳೆ: ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಕ್ರೀಡಾಂಗಣದಲ್ಲಿ ಯುನೈಟೆಡ್ ಬಂಟ್ಸ್ ಕಾಸರಗೋಡು ಸೌಹಾರ್ಧವಾಗಿ ಆಯೋಜಿಸಿದ್ದ ಬಂಟ ಸಮುದಾಯದವರ 20 ಓವರ್ ಗಳ ಅಂಡ ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ಯುನೈಟೆಡ್ ಬಂಟ್ಸ್ ಕಾಸರಗೋಡು, ಶೆಟ್ಟಿ ಬ್ರದರ್ಸ್ ಕೂಳೂರು, ದೇರಂಬಳ ಸ್ಟ್ರೈಕರ್ಸ್ ಮತ್ತು ರಾಯಲ್ ಬಂಟ್ಸ್ ಬಳ್ಳೂರು ಎಂಬ ನಾಲ್ಕು ತಂಡಗಳು ಭಾಗವಹಿಸಿದ್ದವು.
ನಾಕ್ ಔಟ್ ಮಾದರಿಯ ಪಂದ್ಯಾಟದಲ್ಲಿ ರಾಯಲ್ ಬಂಟ್ಸ್ ಬಳ್ಳೂರು ಮತ್ತು ಶೆಟ್ಟಿ ಬ್ರದರ್ಸ್ ಫೈನಲ್ ಹಂತಕ್ಕೆ ತಲುಪಿದರೆ ಗಣೇಶ್ ನಂದು ರೈ ಮತ್ತು ಪ್ರಶಾಂತ್ ಶೆಟ್ಟಿ ಮಾಲಕತ್ವದ ರಾಯಲ್ ಬಂಟ್ಸ್ ತಂಡ ಟ್ರಾಫಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.
ರಾಯಲ್ ಬಂಟ್ಸ್ ತಂಡದ ಧನಂಜಯ ಶೆಟ್ಟಿ ಉತ್ತಮ ಬ್ಯಾಟ್ಸ್ ಮ್ಯಾನ್ ಮತ್ತು ಗಿರಿಪ್ರಸಾದ್ ಶೆಟ್ಟಿ ಉತ್ತಮ ಬೌಲರ್ ಪ್ರಶಸ್ತಿ ಪಡೆದರು.
ಸಮಾರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ರಾಜರಾಜೇಶ್ವರಿ ಮಂಡಪ್ಪಳದ ವ್ಯವಸ್ಥಾಪನ ಕಾರ್ಯದರ್ಶಿ, ಹಿರಿಯ ಧಾರ್ಮಿಕ, ಸಾಮಾಜಿಕ ಮುಖಂಡ ಮಂಜುನಾಥ ಆಳ್ವ ಮಡ್ವ ಅವರು ಬಹುಮಾನಗಳನ್ನು ವಿತರಿಸಿದರು, ಯುನೈಟೆಡ್ ಬಂಟ್ಸ್ ಕಾಸರಗೋಡು ಸಂಸ್ಥಾಪಕ ಮಾಲಕ ಪೃಥ್ವಿರಾಜ್ ಜಗನ್ನಾಥ ಶೆಟ್ಟಿ ಕುಂಬಳೆ ಮತ್ತು ತಂಡದ ಸಂಚಾಲಕ ರೋಹಿತ್ ರೈ ಮಜೀರ್ ಪಳ್ಳ ಸಂಯೋಜಿಸಿದ್ದರು. ಸಂದೀಪ್ ಶೆಟ್ಟಿ ಭೈರೋಡಿ, ಸಂತೋಷ್ ಶೆಟ್ಟಿ ವರ್ಕಾಡಿ,ಅರುಣ್ ಶೆಟ್ಟಿ ಕಂಚಿಕಟ್ಟೆ, ರಾಕೇಶ್ ಶೆಟ್ಟಿ ಇಚ್ಲಂಗೋಡು, ರವಿ ಶೆಟ್ಟಿ ಕುಳ ಮುಂತಾದವರು ಸಹಕರಿಸಿದರು.

