HEALTH TIPS

ವಾಯುಪಡೆಗಾಗಿ 97 ತೇಜಸ್‌ ಜೆ‌ಟ್‌ಗಳ ನಿರ್ಮಾಣಕ್ಕೆ ಎಚ್‌ಎಎಲ್ ಜೊತೆಗೆ ಒಪ್ಪಂದ

ನವದೆಹಲಿ: ಭಾರತೀಯ ವಾಯುಪಡೆಗಾಗಿ ₹62,370 ಕೋಟಿ ವೆಚ್ಚದಲ್ಲಿ 97 ತೇಜಸ್ ಲಘು ಯುದ್ಧ ವಿಮಾನಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯವು ಹಿಂದೂಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್‌) ಜೊತೆಗೆ ಗುರುವಾರ ಒಪ್ಪಂದ ಮಾಡಿಕೊಂಡಿದೆ.

2027-28ರ ವೇಳೆಗೆ ಈ ಯುದ್ಧ ವಿಮಾನಗಳನ್ನು ಎಚ್‌ಎಎಲ್ ವಿತರಿಸಲಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತಾ ಸಂಪುಟ ಸಮಿತಿ (ಸಿಸಿಎಸ್‌) ಈ ಬೃಹತ್ ಖರೀದಿಗೆ ಒಪ್ಪಿಗೆ ನೀಡಿದ ಸುಮಾರು ಒಂದು ತಿಂಗಳ ನಂತರ ಒಪ್ಪಂದ ಮಾಡಿಕೊಳ್ಳಲಾಗಿದೆ.

ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ಗೆ ನೀಡಲಾದ ಎರಡನೇ ಗುತ್ತಿಗೆ ಇದಾಗಿದೆ. 2021ರ ಫೆಬ್ರವರಿಯಲ್ಲಿ ವಾಯುಪಡೆಗಾಗಿ 83 ತೇಜಸ್ ಎಮ್‌ಕೆ-1ಎ ಜೆಟ್‌ಗಳನ್ನು ಖರೀದಿಸಲು ₹48,000 ಕೋಟಿಗಳ ಒಪ್ಪಂದವನ್ನು ಮಾಡಿಕೊಂಡಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries