HEALTH TIPS

ಗಾಜಾ ಮೇಲೆ ಇಸ್ರೇಲ್‌ ದಾಳಿ: ಭಾರತ, ಆಫ್ರಿಕಾ ಖಂಡನೆ

ವಿಶ್ವಸಂಸ್ಥೆ/ನ್ಯೂಯಾರ್ಕ್‌: ಭಾರತ, ಬ್ರೆಜಿಲ್‌ ಹಾಗೂ ‌ದಕ್ಷಿಣ ಆಫ್ರಿಕಾಗಳು ಗಾಜಾ ಮೇಲಿನ ಇಸ್ರೇಲ್‌ ದಾಳಿಯನ್ನು ತೀವ್ರವಾಗಿ ಖಂಡಿಸಿದವು. ಅಲ್ಲದೇ ಇಸ್ರೇಲ್‌ ಆಕ್ರಮಿತ ಪ್ಯಾಲೆಸ್ಟೀನ್‌ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದವು‌. 

'ಸಾವು-ನೋವು, ಬಲವಂತದ ಸ್ಥಳಾಂತರ ಹಾಗೂ ನಿರಂತರ ದಾಳಿಯಿಂದಾಗಿ ಜನರು ಸಂಕಟ ಪಡುತ್ತಿದ್ದಾರೆ. ಈ ದಾಳಿ ನಿಲ್ಲಬೇಕು' ಎಂದು ಪ್ರಕಟಣೆಯಲ್ಲಿ ತಿಳಿಸ‌ಲಾಗಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸಂದರ್ಭದಲ್ಲಿ ತ್ರಿಪಕ್ಷೀಯ ಸಭೆಯು ಶುಕ್ರವಾರ (ಭಾರತ, ಬ್ರೆಜಿಲ್‌ ಹಾಗೂ ‌ದಕ್ಷಿಣ ಆಫ್ರಿಕಾ) ನಡೆಯಿತು. ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಭಾರತವನ್ನು ಪ್ರತಿನಿಧಿಸಿದ್ದರು.

ಸುಂಕ ಹೇರಿಕೆ: 'ಬ್ರಿಕ್ಸ್‌' ಕಳವಳ

'ವಿವೇಚನಾರಹಿತ' ರೂಪದಲ್ಲಿ ಸುಂಕಗಳನ್ನು ಏರಿಕೆ ಮಾಡುವುದು ಹಾಗೂ ವ್ಯಾಪಾರದ ಮೇಲೆ ನಿರ್ಬಂಧ ಹೇರುವಂತ ಕ್ರಮಗಳ ಕುರಿತು 'ಬ್ರಿಕ್ಸ್‌' ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ.

ಅದರಲ್ಲೂ ಸುಂಕವನ್ನು ಬಲವಂತದ ಸಾಧನವನ್ನಾಗಿ ಬಳಸುವ ಕ್ರಮಗಳು ಮತ್ತು ಅಂಥ ಅಭ್ಯಾಸಗಳು ದಕ್ಷಿಣ ರಾಷ್ಟ್ರಗಳನ್ನು ಹಿಂದೆ ಸರಿಸುವ ಅಪಾಯವನ್ನುಂಟು ಮಾಡುತ್ತವೆ. ಜಾಗತಿಕ ವ್ಯಾಪಾರವನ್ನು ಹಾಳು ಮಾಡುತ್ತವೆ ಎಂದು ಎಚ್ಚರಿಸಿವೆ.

'ಸುಂಕ ಹೇರಿಕೆಯನ್ನು ಬಲವಂತದ ಸಾಧನವನ್ನಾಗಿ ಬಳಸುವುದು, ಜಾಗತಿಕ ಪೂರೈಕೆ ಸರಪಳಿಗೆ ಅಡ್ಡಿಯನ್ನುಂಟುಮಾಡುತ್ತದೆ. ಅಂತರರಾಷ್ಟ್ರೀಯ ವ್ಯಾಪಾರ, ಆರ್ಥಿಕ ಚಟುವಟಿಕೆಗಳಲ್ಲಿ ಅನಿಶ್ಚಿತತೆಯನ್ನುಂಟು ಮಾಡುತ್ತವೆ ಮತ್ತು ಆರ್ಥಿಕ ಅಸಮಾನತೆಗೆ ಕಾರಣವಾಗುತ್ತವೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು' ಎಂದು ಇಲ್ಲಿ ನಡೆದ ಸಭೆ ಬಳಿಕ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಮೆರಿಕವು ಭಾರತದ ಮೇಲೆ ಇತ್ತೀಚೆಗೆ ಶೇ 50ರಷ್ಟು ಸುಂಕ ಹೇರಿದೆ. ರಷ್ಯಾದಿಂದ ತೈಲ ಖರೀದಿಸುತ್ತಿರುವುದರಿಂದ ಶೇ25ರಷ್ಟು ದಂಡವನ್ನೂ ವಿಧಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries