ಮಧೂರು: ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ಬೆಳ್ಳಿಹಬ್ಬಾಚರಣೆಯ ಪೂರ್ವಭಾವಿಯಾಗಿ ಸಂಘಟನ ಸಮಿತಿ ರಚನೆ ಸಭೆ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ನಡೆಯಿತು. ಶೀಘ್ರದಲ್ಲೇ ಬೆಳ್ಳಿಹಬ್ಬದ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಒಂದಿಡೀ ವರ್ಷ ನಡೆಸುವ ವಿವಿಧ ರಚನಾತ್ಮಕ ಚಟುವಟಿಕೆಗಳ ಬಗ್ಗೆ ಮಾತುಕತೆ ನಡೆಸಲಾಯಿತು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಕೊಂಡೆವೂರು ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ತಂತ್ರಿ ಉಳಿಯತ್ತಾಯ ವಿಷ್ಣು ಆಸ್ರ ಮತ್ತು ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ ಮುಖ್ಯ ಅತಿಥಿಯಾಗಿದ್ದರು. ಆನುವಂಶಿಕ ಮೊಕ್ತೇಸರ ಕೆ.ಜಿ.ಶ್ಯಾನುಭಾಗ ಅಧ್ಯಕ್ಷತೆ ವಹಿಸಿದ್ದರು.
ಕಿಶೋರ್ ಕುಮಾರ್ ಕೂಡ್ಲು ಸ್ವಾಗತಿಸಿ, ಶೇಣಿ ವೇಣುಗೋಪಾಲ ಭಟ್ ಪ್ರಸ್ತಾವಿಕವಾಗಿ ಮಾತನಾಡಿದರು. ಗುರುರಾಜ ಹೊಳ್ಳ ಬಾಯಾರು ಕಾರ್ಯಕ್ರಮ ನಿರೂಪಿಸಿದರು. ಸುರೇಶ ಮಣಿಯಾಣಿ ಕೂಡ್ಲು ವಂದಿಸಿದರು.
ಸಂಘಟಕ ಸಮಿತಿ ಪದಾಧಿಕಾರಿಗಳು : ಗೌರವಾಧ್ಯಕ್ಷರು-ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಕೊಂಡೆವೂರು ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ತಂತ್ರಿ ಉಳಿಯತ್ತಾಯ ವಿಷ್ಣು ಆಸ್ರ, ಅಧ್ಯಕ್ಷರಾಗಿ ಡಾ.ಹರಿಕಿರಣ್ ಬಂಗೇರ, ಪ್ರಧಾನ ಕಾರ್ಯದರ್ಶಿಯಾಗಿ ಹರಿನಾರಾಯಣ ಮಯ್ಯ, ಉಪಾಧ್ಯಕ್ಷರುಗಳಾಗಿ ಕೇಶವ ಅಡಿಗ ಕುಂಬಳೆ, ನಾಗೇಂದ್ರ ಭಟ್ ಕೂಡ್ಲು, ರವಿರಾಜ ಅಡಿಗ ಕೂಡ್ಲು, ವೆಂಕಟೇಶ ರಂಗಭಟ್ ಮಧೂರು, ಚಂದ್ರ ಮೋಹನ ಕೂಡ್ಲು, ಜೊತೆ ಕಾರ್ಯದರ್ಶಿಗಳಾಗಿ ಸತ್ಯನಾರಾಯಣ ತಂತ್ರಿ, ತಲ್ಪಣಾಜೆ ವೆಂಕಟ್ರಮಣ ಭಟ್, ಮಾಧವ ಭಟ್, ಕಿಶೋರ್ ಕುಮಾರ್ ಕೂಡ್ಲು, ರಾಮಪ್ರಸಾದ್ ಮಯ್ಯ ಕೂಡ್ಲು. ಕೋಶಾಧಿಕಾರಿಯಾಗಿ ಕೃಷ್ಣಮೂರ್ತಿ ಅಡಿಗ ಕೂಡ್ಲು, ಸಹ ಕೋಶಾಧಿಕಾರಿಯಾಗಿ ವಿಘ್ನೇಶ ಕಾರಂತ ಕೂಡ್ಲು ಅವರನ್ನು ಆಯ್ಕೆಮಾಡಲಾಯಿತು.




