ಮಂಜೇಶ್ವರ: ಕೊಲ್ಲಂಗಾನ ಶ್ರೀನಿಲಯ ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ಜರಗುತ್ತಿರುವ ನವರಾತ್ರಿ ಮಹೋತ್ಸವದ ಪ್ರಯುಕ್ತ ಮೂಡಂಬೈಲಿನ ವಾಗ್ದೇವೀ ಯಕ್ಷಗಾನ ಕಲಾಸಂಘದಿಂದ 'ಶಲ್ಯ ಸಾರಥ್ಯ' ಕಥಾಭಾಗದ ತಾಳಮದ್ದಳೆ ಜರಗಿತು. ಪಾತ್ರವರ್ಗದಲ್ಲಿ ನಾಗರಾಜ ಪದಕಣ್ಣಾಯ ಮೂಡಂಬೈಲು, ಬಾಲಕೃಷ್ಣ ಆಚಾರ್ಯ ನೀರ್ಚಾಲು, ನಾರಾಯಣ ನಾವಡ ಮೂಡಂಬೈಲು, ಮುರಳೀಮಾಧವ ಮಧೂರು ಹಾಗೂ ಶಾಶ್ವತಿ ನಾವಡ ಮೂಡಂಬೈಲು ಭಾಗವಹಿಸಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ರವಿಶಂಕರ್ ಮಧೂರು, ಚೆಂಡೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು ಮತ್ತು ಮೃದಂಗದಲ್ಲಿ ಮುರಳೀಮಾಧವ ಮಧೂರು ಸಹಕರಿಸಿದರು.




.jpg)
