ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಹೆಮ್ಮೆಯ ಹಳೆವಿದ್ಯಾರ್ಥಿ, ಈ ವರ್ಷದ ಕರ್ನಾಟಕ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ, ಅಂಬಲಮೊಗ್ರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಗದೀಶ್ ಶೆಟ್ಟಿ ಎಲಿಯಾಣ ಅವರನ್ನು ಶ್ರೀ ವಿದ್ಯಾವರ್ಧಕ ಶಾಲೆ ಹಾಗೂ ಕಾಲೇಜು ವತಿಯಿಂದ ಶಾಲಾ ಕಲೋತ್ಸವ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.
ಶಾಲಾ ಸಂಚಾಲಕ ಡಾ. ಜಯಪ್ರಕಾಶ್ ನಾರಾಯಣ, ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿತರಿಗೂ ಗುರುಗಳಾಗಿದ್ದ ಕೆರೆಕೋಡಿ ತಿರುಮಲೇಶ್ವರ ಭಟ್ ಸನ್ಮಾನಿಸಿದರು. ನಿವೃತ್ತ ಮುಖ್ಯ ಶಿಕ್ಷಕ ರಾಜಾರಾಮ ರಾವ್ ಶುಭ ಹಾರೈಸಿದರು. ಇನ್ನೋರ್ವ ಹಳೆ ವಿದ್ಯಾರ್ಥಿ ಹಾಗೂ ದಕ್ಷಿಣ ಕನ್ನಡದ ಮಲಾರ್ ಸರ್ಕಾರಿ ಶಾಲಾ ಸಹ ಶಿಕ್ಷಕ ರಾಧಾಕೃಷ್ಣ ರಾವ್ ಟಿ. ಡಿ. ಸನ್ಮಾನಿತರ ಬಗ್ಗೆ ಅಭಿನಂದನಾ ನುಡಿಗಳನ್ನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಜಗದೀಶ್ ಶೆಟ್ಟಿ ಅವರು, ತಾನು ಕಲಿತ ಶಾಲೆಯಲ್ಲಿ ಕಲಿಸಿದ ಗುರುಗಳಿಂದಲೇ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸನ್ಮಾನ ಗೌರವ ಸ್ವೀಕರಿಸಿದ್ದು ನನ್ನನ್ನು ಧನ್ಯನನ್ನಾಗಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು. ಶಾಲಾ ಮುಖ್ಯ ಶಿಕ್ಷಕಿ ಮೃದುಲಾ ಸ್ವಾಗತಿಸಿ, ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲ ರಮೇಶ್ ಕೆ.ಯನ್. ವಂದಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಹೊನ್ನೆಕಟ್ಟೆ, ಮಾತೃ ಮಂಡಳಿ ಅಧ್ಯಕ್ಷೆ ನಬೀಸತ್ ಮಿಸ್ರಿಯಾ, ಶಾಲಾ ಸಂರಕ್ಷಣಾ ಸಮಿತಿ ಮುಖ್ಯಸ್ಥ ಚಂದ್ರಶೇಖರ. ಎಂ.,ಜಗದೀಶ ಶೆಟ್ಟಿಯವರ ಪತ್ನಿ ಶುಭ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ಕಿರಣ ಕುದ್ರೆಕ್ಕೋಡ್ಲು ಕಾರ್ಯಕ್ರಮ ನಿರೂಪಿಸಿದರು.

.jpg)
