ಕಾಸರಗೋಡು: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಹಿರಿಯ ಯಕ್ಷಗಾನ ಅರ್ಥಧಾರಿ, ಯಕ್ಷಗಾನ ಕಲಾವಿದ, ಮಲಯಾಳಂ ಯಕ್ಷಗಾನದ ಪಿತಾಮಹ ಅಡ್ಕ ಗೋಪಾಲಕೃಷ್ಣ ಭಟ್ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದರು.
ಈ ಸಂದರ್ಭ ಎಡನೀರುಶ್ರೀಗಳು ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಶ್ರೀ ಅಡ್ಕ ಅವರು ತಮ್ಮ ಕಲಾಜೀವನದ ಅನುಭವಗಳನ್ನು ಶ್ರೀ ಸಚ್ಚಿದಾನಂದ ಸ್ವಾಮೀಜಿ ಅವರಲ್ಲಿ ಹಂಚಿಕೊಂಡು, ಸ್ವಾಮೀಜಿಗಳು ತಮ್ಮ ನಿವಾಸಕ್ಕೆ ಭೇಟಿ ನೀಡಿರುವುದಕ್ಕೆ ಅತಿಯಾದ ಸಂತೋಷ ವ್ಯಕ್ತಪಡಿಸಿ ತುಂಬು ಹೃದಯದ ಧನ್ಯವಾದ ಸಮರ್ಪಿಸಿದರು..
ಕಾಸರಗೋಡು ತಾಲೂಕು ಮುಳಿಯಾರು ಗ್ರಾಮದ ಕೋಟೂರು ಸಮೀಪ ಅಡ್ಕ ಎಂಬಲ್ಲಿ 92ರ ಹರೆಯದ ಗೋಪಾಲಕೃಷ್ಣ ಭಟ್ ಅವರು ತಮ್ಮಕುಟುಂಬದವರೊಂದಿಗೆ ವಾಸಿಸುತ್ತಿದ್ದಾರೆ.


