ಕೊಚ್ಚಿ: ಕನ್ನಡ ಸಂಘ ಕೊಚ್ಚಿನ್ ಇದರ ವಾರ್ಷಿಕ ಮಹಾಸಭೆ ಕೊಚ್ಚಿನ್‍ನಲ್ಲಿ ಇತ್ತೀಚೆಗೆ ಜರಗಿತು. ಕಳೆದ ವರ್ಷದ ಆಗುಹೋಗುಗಳ ವರದಿಯನ್ನು ಸಂಘದ ಕಾರ್ಯದರ್ಶಿ ವಜ್ರಾಂಗ (ಹರೀಶ) ವಾಚಿಸಿದರು. 2024-25ನೇ ಸಾಲಿನ ಲೆಕ್ಕಪತ್ರವನ್ನು ಕೋಶಾಧಿಕಾರಿ ವಿಷ್ಣು ತಂತ್ರಿ ಮಂಡಿಸಿದರು. ಈ ವರ್ಷದ ಶ್ರೀ ಗಣೇಶ ಚತುರ್ಥಿ ಉತ್ಸವದ ಖರ್ಚು ವೆಚ್ಚಗಳ ವರದಿಯನ್ನು ಶ್ರೀಕಾಂತ ಅನವಟ್ಟಿ ವಾಚಿಸಿದರು.
ಕೊಚ್ಚಿನ್ ಕನ್ನಡ ಸಂಘ ನೂತನ ಸಮಿತಿ:
ಇದೇ ವೇಳೆ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀನಿವಾಸ ರಾವ್, ಉಪಾಧ್ಯಕ್ಷೆಯಾಗಿ ಚಾರುಲತಾ ಕೌಡಿ, ಕಾರ್ಯದರ್ಶಿಯಾಗಿ ವಜ್ರಾಂಗ (ಹರೀಶ), ಜೊತೆ ಕಾರ್ಯದರ್ಶಿಯಾಗಿ ಡಾ.ಪರಿಣಿತ ರವಿ, ಕೋಶಾಧಿಕಾರಿಯಾಗಿ ವಿಷ್ಣುಕುಮಾರ್ ತಂತ್ರಿ ಅವರನ್ನು ಆರಿಸಲಾಯಿತು.
ವೇದಿನಿ ಪ್ರಾರ್ಥನೆ ಹಾಡಿದರು. ಸಂಘದ ಜೊತೆ ಕಾರ್ಯದರ್ಶಿ ಡಾ.ಪರಿಣಿತ ರವಿ ಸ್ವಾಗತಿಸಿ, ವಂದಿಸಿದರು. ಸಂಘದ ಮಾಜಿ ಅಧ್ಯಕ್ಷ ಶ್ರೀಕಾಂತ ಅನವಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವಿಭಿನ್ನ ಕನ್ನಡಪರ ಕಾರ್ಯಕ್ರಮ:
ಸತತ 60 ವರ್ಷÀಗಳಿಂದ ವಿಭಿನ್ನ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸಿ ಖ್ಯಾತವಾಗಿರುವ ಕೊಚ್ಚಿನ್ ಕನ್ನಡ ಸಂಘದ ಕನ್ನಡ ಸೇವೆ ಅಭಿನಂದನಾರ್ಹ ಹಾಗೂ ಶ್ಲಾಘನೀಯ. ಈ ವರ್ಷ 61ನೇ ಸಂವತ್ಸರವನ್ನು ಪೂರೈಸುತ್ತಿರುವ ಕೊಚ್ಚಿನ್ ಕನ್ನಡ ಸಂಘದ ನೇತೃತ್ವದಲ್ಲಿ ಇನ್ನಷ್ಟು ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.



