ಬದಿಯಡ್ಕ: ಬದಿಯಡ್ಕ ಟ್ರೇಡರ್ಸ್ ಆಶ್ರಯದಲ್ಲಿ ಓಣಂ ಸಿರಿ ಕಾರ್ಯಕ್ರಮ ಇರಾ ಸಭಾಭವನದಲ್ಲಿ ಇತ್ತೀಚೆಗೆ ಜರಗಿತು. ಕಾರ್ಯಕ್ರಮದಲ್ಲಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಅಧ್ಯಕ್ಷ ನರೇಂದ್ರ ಬಿ. ಉದ್ಘಾಟಿಸಿ ಕೇರಳದ ನಾಡ ಹಬ್ಬ ಓಣಂನ್ನು ಜಾತಿ ಮತ ಭೇದವಿಲ್ಲದೆ ಸಂಭ್ರಮದಿಂದ ಆಚರಿಸುತ್ತಿರುವುದು ಸಂತೋಷದ ವಿಷಯ. ಮಹಾಬಲಿ ಚಕ್ರವರ್ತಿಯ ಕೇರಳ ಸಂದರ್ಶನದ ನೆನಪಿಗೋಸ್ಕರ ಆಚರಿಸುತ್ತಾರೆ ಎಂದರು.
ಹಿರಿಯ ವ್ಯಾಪಾರಿ ಪಾಂಡರಂಗ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ದಿನೇಶ್ ಮುಖ್ಯ ಅತಿಥಿಯಾಗಿ ಮಾತನಾಡಿದರು. ಉದ್ಯಮಿ ಹರೀಶ್ ರೈ ಪುತ್ರಕಳ ಮತ್ತು ಪ್ರತಿಭೆ ಪ್ರವಿಶಾ ಪೊಡಿಪ್ಪಳ್ಳ ಅವರನ್ನು ಅಭಿನಂದಿಸಲಾಯಿತು. ರಮನಾಥ ರೈ, ರವಿ ನವಶಕ್ತಿ, ರತ್ನಾಕರ ಓಡಂಗಲ್ಲು, ತಾರಾನಾಥ ರೈ, ಬ್ರಯಾನ್, ಉಮೇಶ್ ರೈ, ಹನೀಫ್ ಮುಂತಾದವರು ಉಪಸ್ಥಿತರಿದ್ದರು. ದಯಾನಂದ ರೈ ಸ್ವಾಗತಿಸಿ, ಸತೀಶ್ ವಂದಿಸಿದರು. ಅಖಿಲೇಶ್ ನಗುಮುಗಂ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಂಗವಾಗಿ ತಿರುವಾದಿರಕ್ಕಳಿ, ಲಿಂಬೆ ಚಮಚ ಹಾಗೂ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿತು. ಹೂವಿನ ರಂಗೋಲಿ, ಓಣಂ ಸದ್ಯದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.




.jpg)
