ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಎನ್.ಸಿ.ಸಿ. ಭೂ ಸೇನೆಯ ಅಧಿಕಾರಿ ಲೆಫ್ಟಿನೆಂಟ್ ಈಶ್ವರ ನಾಯಕ್ ಕೆ. ಅವರು ಕ್ಯಾಪ್ಟನ್ ಆಗಿ ಭಡ್ತಿ ಲಭಿಸಿದೆ. ಇವರು 10 ವರ್ಷಗಳಿಂದ ಎನ್.ಸಿ.ಸಿ. ಅಧಿಕಾರಿಯಾಗಿ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ತರಬೇತಿಯನ್ನು
ಭಾರತದ ಏಕೈಕ ತರಬೇತಿ ಸಂಸ್ಥೆಯಾದ ಮಹಾರಾಷ್ಟದ ನಾಗಪುರ ಕಾಂಪ್ಟೀಯ ಆಫೀಸರ್ಸ್ ಟ್ರೈನ್ನಿಂಗ್ ಅಕಾಡಮಿ (ಒಟಿಎ)ಯಲ್ಲಿ ಪೂರ್ತಿಗೊಳಿಸಿದ್ದರು. ಇವರು ಪಯನ್ನೂರ್ ಲ್ಲಿರುವ 32ನೇ ಕೇರಳ ಬೇಟಾಲಿಯನ್ ಎನ್.ಸಿ.ಸಿ.ಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಶಾಲೆಯ ರಾಜ್ಯಶಾಸ್ತ್ರ ವಿಭಾಗದ ಅಧ್ಯಾಪಕರಾಗಿದ್ದರೆ. ನಲ್ಕ ಕೇರಿಮೂಲೆ ನಿವಾಸಿಯಾಗಿರುವ ಇವರ ಸಾಧನೆಗೆ ಕಾಟುಕುಕ್ಕೆ ಶಾಲಾ ಪ್ರಬಂಧಕರು, ಪ್ರಾಂಶುಪಾಲರು, ಅಡಳಿತ ಮಂಡಳಿ ಸದಸ್ಯರು ಮತ್ತು ಅಧ್ಯಾಪಕ ವೃಂದ ಅಭಿನಂದಿಸಿದೆ.




-ISHWARA%20NAIKA.jpg)
