ಕುಂಬಳೆ: ಮಂಗಳೂರಿನ ಕರಂಗಲ್ಪಾಡಿ ನಿತ್ಯಾನಂದ ಧ್ಯಾನ ಕೇಂದ್ರದ ಆಶ್ರಯದಲ್ಲಿ ಇದೇ ಸೆಪ್ಟೆಂಬರ್ 21 ರ ಭಾನುವಾರದಂದು ಶ್ರೀ ಭಾರತಿ ವಿದ್ಯಾಪೀಠ ಮುಜುಂಗಾವು ಶಾಲಾ ಸಭಾಂಗಣದಲ್ಲಿ ಉಚಿತ ಮಾಸ್ ಹೀಲಿಂಗ್ (ಸಾಮೂಹಿಕ ಚಿಕಿತ್ಸೆ) ಹಾಗೂ ಉಚಿತ ಪೂರ್ವಜನ್ಮಯಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 11: ರಿಂದ ಸಂಜೆ 4: ರವರೆಗೆ ಶಿಬಿರವು ನಡೆಯಲಿದೆ. ಖ್ಯಾತ ಕಣ್ಣಿನ ತಜ್ಞರಾದ ಡಾ.ನಿತ್ಯಾನಂದ.ಎ.ಶೆಟ್ಟಿ (ಮಂಗಳೂರು -ಮುಜುಂಗಾವು)ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಶಿಬಿರಕ್ಕೆ ನೊಂದಾವಣಿ ಮಾಡಲು ದೂರವಾಣಿ ಸಂಖ್ಯೆ : 9744275999, 9449639340 ಸಂಪರ್ಕಿಸಲು ಸೂಚಿಸಲಾಗಿದೆ.





