ಬದಿಯಡ್ಕ: ನಾರಂಪಾಡಿ ಶಿವಗಿರಿ ಫ್ರೆಂಡ್ಸ್ ಕ್ಲಬ್ಬಿನ ನೇತೃತ್ವದಲ್ಲಿ ಶಿವಗಿರಿ ಮೈದಾನದಲ್ಲಿ ಓಣಂ ಆಚರಣೆ 2025 ಕಾರ್ಯಕ್ರಮ ನಡೆಯಿತು. ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಹರಿನಾರಾಯಣ ಮಾಸ್ತರ್ ಶಿರಂತಡ್ಕ ದೀಪ ಬೆಳಗಿಸಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಕಲಾವತಿ ಟೀಚರ್, ನಾರಂಪಾಡಿ ಗುತ್ತು ದೈವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ತ್ಯಾಂಪಣ್ಣ ಭಂಡಾರಿ, ತ್ಯಾಗರಾಜ ರೈ ನಾರಂಪಾಡಿ ಉಪಸ್ಥಿತರಿದ್ದರು.
ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಧಾರ್ಮಿಕ ಮುಂದಾಳು ನಿತ್ಯಾನಂದ ಶೆಣೈ ಬದಿಯಡ್ಕ ಉದ್ಘಾಟಿಸಿದರು. ಶಿವಗಿರಿ ಕ್ಲಬ್ಬಿನ ಅಧ್ಯಕ್ಷ ಪ್ರಶಾಂತ್ ಮುಂಡೋಳುಮೂಲೆ ಅಧ್ಯಕ್ಷತೆ ವಹಿಸಿದ್ದರು. ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಮಾಸ್ತರ್ ನಾರಂಪಾಡಿ, ಧಾರ್ಮಿಕ ಮುಂದಾಳು ಸುಬ್ರಹ್ಮಣ್ಯ ಭಟ್ ತಲೇಕ, ಚೆಂಗಳ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಲತೀಫ್ ಸಿ ಕೆ ಭಾಗವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದ ಅಶ್ವಿನ್ ಪುಂಡೂರು, ಮಾರ್ಕು ಡಿಸೋಜ ನಾರಂಪಾಡಿ ಅವರನ್ನು ಗೌರವಿಸಲಾಯಿತು. ಆಟೋಟ ಸ್ಪರ್ಧೆಗಳಲ್ಲಿ ವಿಜಯಿಗಳಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಕುಮಾರಿ ಶೃತಿ ಮತ್ತು ಕುಮಾರಿ ಆಧ್ಯಾ ಪ್ರಾರ್ಥನೆ ಹಾಡಿದರು. ಸುಬ್ರಹ್ಮಣ್ಯ ಪಿಲಿಕೂಡ್ಲು ಸ್ವಾಗತಿಸಿ, ಹರೀಶ್ ನಾರಂಪಾಡಿ ವಂದಿಸಿದರು, ಕುಮಾರಿ ಅಕ್ಷತ ನಿರೂಪಿಸಿದರು.





