ಹೈದರಾಬಾದ್: ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ನಿರ್ದೇಶಕ ಪ್ರವೀಣ್ ಸೂದ್, ಹಠಾತ್ ಅಸ್ವಸ್ಥಗೊಂಡು ಶನಿವಾರ ಇಲ್ಲಿನ ಆಸ್ಪತ್ರೆಗೆ ದಾಖಲಾದರು.
ಶ್ರೀಶೈಲದಿಂದ ಹೈದರಾಬಾದ್‌ಗೆ ವಾಪಾಸ್ಸಾಗುತ್ತಿದ್ದ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರವೀಣ್ ಸೂದ್ ಅವರು ಶ್ರೀಶೈಲದ ಭ್ರಮರಾಂಬಿಕಾ ಮತ್ತು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿ ಮರಳುತ್ತಿದ್ದರು. ಹೈದರಾಬಾದ್‌ನ ಜ್ಯೂಬಿಲಿ ಹಿಲ್‌ನಲ್ಲಿರುವ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.




