ನವದೆಹಲಿ: ನೇಪಾಳದಲ್ಲಿ ಅಸ್ಥಿರತೆ ಸೃಷ್ಟಿಯಾಗಿರುವ ಬೆನ್ನಲ್ಲೇ, ಪರಿಸ್ಥಿತಿ ತಹಬದಿಗೆ ತರುವ ತನಕವೂ ನೆರೆ ರಾಷ್ಟ್ರಕ್ಕೆ ಭೇಟಿ ನೀಡುವುದನ್ನು ಮುಂದೂಡುವಂತೆ ನಾಗರಿಕರಿಗೆ ಸರ್ಕಾರ ಸೂಚಿಸಿದೆ.
'ಈಗಾಗಲೇ ನೇಪಾಳದಲ್ಲಿರುವ ಭಾರತೀಯರು ಯಾವುದೇ ಕಾರಣಕ್ಕೂ ರಸ್ತೆಗಿಳಿಯಬಾರದು, ಸಂಘರ್ಷದ ಸ್ಥಳದತ್ತ ಹೋಗಬಾರದು' ಎಂದು ಕೇಂದ್ರ ವಿದೇಶಾಂಗ ಇಲಾಖೆ (ಎಂಇಇಎ) ಬಿಡುಗಡೆಗೊಳಿಸಿರುವ ಸಲಹಾ ಪ್ರಕಟಣೆಯಲ್ಲಿ ತಿಳಿಸಿದೆ.




