ನ್ಯಾ.ಚಂದ್ರನ್ ಅವರ ನಿರಾಕರಣೆಯನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾ.ಅತುಲ್ ಚಂದೂರ್ಕರ್ ಅವರನ್ನೂ ಒಳಗೊಂಡಿದ್ದ ಪೀಠವು ವಕೀಲ ಶಕ್ತಿ ಭಾಟಿಯಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಂದೂಡಿತು.
ಕಂಪೆನಿ ಕಾನೂನಿನಡಿ ಎಂಸಿಎ21 ಪೋರ್ಟಲ್ ನಲ್ಲಿ ಫೈಲಿಂಗ್‌ಗಳು, ಸೆಬಿಗೆ ಬಹಿರಂಗಗೊಳಿಸಿರುವ ಅಂಶಗಳು ಮತ್ತು ಕಂಪನಿಗಳ ರಿಜಿಸ್ಟ್ರಾರ್ ದಾಖಲೆಗಳನ್ನು ಪರಿಶೀಲಿಸುವ ಮೂಲಕ ವೈಸ್‌ರಾಯ್ ರೀಸರ್ಚ್ ವರದಿಯ ಕೆಲವು ಭಾಗಗಳನ್ನು ತಾನು ಸ್ವತಂತ್ರವಾಗಿ ದೃಢಪಡಿಸಿಕೊಂಡಿದ್ದೇನೆ ಎಂದು ಭಾಟಿಯಾ ತನ್ನ ಅರ್ಜಿಯಲ್ಲಿ ವಾದಿಸಿದ್ದಾರೆ.
ವೇದಾಂತ ಸಮೂಹವು ಆರ್ಥಿಕ ಸುಸ್ಥಿರತೆಯನ್ನು ಹೊಂದಿಲ್ಲ ಮತ್ತು ಸಾಲಗಾರರಿಗೆ ತೀವ್ರ ಅಪಾಯವನ್ನೊಡ್ಡಿದೆ ಎಂದು ವೈಸ್‌ರಾಯ್ ರೀಸರ್ಚ್ ತನ್ನ 85 ಪುಟಗಳ ವರದಿಯಲ್ಲಿ ಆರೋಪಿಸಿತ್ತು. ವೇದಾಂತ ಲಿ.ನಲ್ಲಿ ಬಹುಪಾಲು ಒಡೆತನವನ್ನು ಹೊಂದಿರುವ ಮಾತೃ ಕಂಪನಿ ವೇದಾಂತ ರಿಸೋರ್ಸಸ್‌ನ ಡೆಟ್ ಬಾಂಡ್‌ಗಳನ್ನು ತಾನು ಶಾರ್ಟ್ ಸೆಲ್ ಮಾಡುವುದಾಗಿ ಅದು ಹೇಳಿತ್ತು.
ಆರೋಪಗಳನ್ನು ತಳ್ಳಿಹಾಕಿರುವ ವೇದಾಂತ,ಅವು ಕಂಪನಿಗೆ ಅಪಖ್ಯಾತಿಯನ್ನುಂಟು ಮಾಡುವ ಉದ್ದೇಶದ ಆಯ್ದ ತಪ್ಪು ಮಾಹಿತಿಗಳು ಮತ್ತು ಆಧಾರರಹಿತವಾಗಿವೆ ಎಂದು ಹೇಳಿದೆ.




