ಕಾಸರಗೋಡು: ಭಾಷಾಂತರಕ್ಕಾಗಿ ದ್ರಾವಿಡ ಭಾಷಾ ಟ್ರಾನ್ಸ್‍ಲೇಟರ್ಸ್ ಅಸೋಸಿಯೇಷನ್ (ದ್ರಾವಿಡ ಭಾಷಾ ಅನುವಾದಕರ ಸಂಘ -ಡಿಬಿಟಿಎ) ನೀಡುವ ಪ್ರತಿಷ್ಟಿತ ಭಾಷಾಂತರ ಪ್ರಶಸ್ತಿಗೆ ಹಂಪಿ ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕಾಸರಗೋಡಿನ ಡಾ. ಎ. ಮೋಹನ ಕುಂಟಾರು ಆಯ್ಕೆಯಾಗಿದ್ದಾರೆ.
ತಗಳಿ ಶಿವಶಂಕರ ಪಿಳ್ಳೆ ಮಲಯಾಳದಲ್ಲಿ ರಚಿಸಿ ಜನಪ್ರಿಯವಾದ ಕಾದಂಬರಿ 'ಚೆಮ್ಮೀನ್'(ಸಿಗಡಿ ಮೀನು)ಕೃತಿಯನ್ನು ಅದೇ ಹೆಸರಲ್ಲಿ 50ವರ್ಷಗಳ ಬಳಿಕ ಕನ್ನಡಾನುವಾದ ಮಾಡಿರುವುದಕ್ಕಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು 11,111ರೂ. ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.
ದ್ರಾವಿಡ ಭಾಷಾನುವಾದಕರಿಗೆ ಸೀಮಿತವಾಗಿರುವ ಈ ಪ್ರಶಸ್ತಿಯು ಈ ಹಿಂದಿನ ವರ್ಷ ತಮಿಳಿನ ಪಾಲಾಗಿತ್ತು. ಅನುಕ್ರಮವಾಗಿ ಮುಂದಿನವರ್ಷ ಮಲಯಾಳಂ ಭಾಷೆಗೆ ದೊರೆಯಲಿದೆ.
ಸೆ. 26ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿರುವುದಾಗಿ ಡಿಬಿಟಿಎ ಸಂಘದ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.





