ಉಪ್ಪಳ: ಅನೇಕ ಸವಲತ್ತು ಗಳ ಅಭಾವ ದಿಂದ ಪೈವಳಿಕೆ ಪಂಚಾಯತ್ ಅಭಿವೃದ್ಧಿ ಶೂನ್ಯವಾಗಿದೆ, ಇದಕ್ಕೆ ಪಂಚಾಯತಿ ಆಡಳಿತ ಪಕ್ಷಗಳು ಕಾರಣ. ಪೈವಳಿಕೆಯ ಸಮಗ್ರ ಅಭಿವೃದ್ಧಿಗೆ ಬಿಜೆಪಿಗೆ ಅವಕಾಶ ನೀಡಿ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಹೇಳಿದರು
ಪೈವಳಿಕೆ ಪಂಚಾಯತಿ 8 ನೇ ವಾರ್ಡ್ ನ ಬೆರಿಪದವು ವಾರ್ಡ್ ಸಮ್ಮೇಳನ ಉದ್ಘಾಟಿಸಿ ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ ಎಲ್. ಮಾತನಾಡಿದರು
ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಮಂಡಲ ಅಧ್ಯಕ್ಷ ಆದರ್ಶ ಬಿ.ಎ., ಪಂಚಾಯತಿ ಸದಸ್ಯೆ ಜಯಲಕ್ಷ್ಮಿ ಭಟ್, ಬಿಜೆಪಿ ಮಂಡಲ ಸಮಿತಿ ಸದಸ್ಯ ಸುಬ್ರಮಣ್ಯ ಭಟ್, ಬಿಜೆಪಿ ನಾರ್ತ್ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ರೈ ಉಪಸ್ಥಿತರಿದ್ದರು. ಬೂತ್ ಅಧ್ಯಕ್ಷೆ ಶಶಿಕಲಾ ಅಧ್ಯಕ್ಷತೆ ವಹಿಸಿದ್ದರು.





