ಕಾಸರಗೋಡು: ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ)ಕಾಸರಗೋಡು ವೆಸ್ಟ್ ಯೂನಿಟ್ ವಾರ್ಷಿಕ ಸಮ್ಮೇಳನ ಕಾಸರಗೋಡು ಎಕೆಪಿಎ ಭವನದಲ್ಲಿ ಜರಗಿತು. ಎಕೆಪಿಎ ಕಾಸರಗೋಡು ವಲಯ ಅಧ್ಯಕ್ಷ ಸನ್ನಿ ಜೇಕಬ್ ಸಮಾರಂಭ ಉದ್ಘಾಟಿಸಿದರು. ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕಾಸರಗೋಡು ಜಿಲ್ಲಾ ಪೆÇೀಲೀಸ್ ಮತ್ತು ಕಾಸರಗೋಡು ಜಿಲ್ಲಾ ನೇಚರ್ ಕ್ಲಬ್ ನಡೆಸಿದ ಛಾಯಾಚಿತ್ರ ಸ್ಪರ್ಧೆ ಟ್ರಾಫಿಕ್ ವಿಷಯದಲ್ಲಿ ದ್ವಿತೀಯ ಬಹುಮಾನಗಳಿಸಿದ ಅನಿಲ್ ಐ ಫೆÇೀಕಸ್, ತೃತೀಯ ಬಹುಮಾನಗಳಿಸಿದ ಮಣಿ ಐ ಫೆÇೀಕಸ್, ಎಕೆಪಿಎ ಬ್ಲಡ್ ಡೋನರ್ಸ್ ಕ್ಲಬ್‍ಗೆ ಅಲ್ಲದೆ ಅಗತ್ಯವೆನಿಸಿದಾಗ 30 ಕ್ಕಿಂತ ಆಧಿಕ ಬಾರಿ ರಕ್ತದಾನ ಮಾಡಿದ ಯುನಿಟಿನ ಸುಬ್ರಹ್ಮಣ್ಯ ಎಂ.ಎಸ್, ಮನು ಎಲ್ಲೋರ, ಪ್ರಜೀಶ್, ಪ್ಲಸ್‍ಟು ತರಗತಿಯಲ್ಲಿ ಅಧಿಕ ಅಂಕ ಗಳಿಸಿದ ರಕ್ಷಿತ್ ರೈ, ರಾಜ್ಯ ಮಟ್ಟದ ಕೆಡೆಟ್ ಲೀಡರ್-ಜಿಲ್ಲಾ ಮಟ್ಟದ ಒಪ್ಪನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಯೂನಿಟ್ ಸದಸ್ಯ ರಹಮಾನ್ ಚೆಮ್ನಾಡ್ ಅವರ ಪುತ್ರಿ ಆದಿಯಾ, ಕೇಶದಾನ ಮಾಡಿದ ಆರ್ದ್ರಾ, ವೆಸ್ಟ್ ಯೂನಿಟ್ ನಿರೀಕ್ಷಕ ಶ್ರೀಜಿತ್ ಅವರಿಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಎಕೆಪಿಎ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಶ್ರೀ ರಾಜೇಂದ್ರನ್ ಮುಖ್ಯ ಭಾಷಣ ಮಾಡಿದರು, ಎಕೆಪಿಎ ಕಾಸರಗೋಡು ವಲಯ ಕಾರ್ಯದರ್ಶಿ ವಾಮನ್ ಕುಮಾರ್ ಸಂಘಟನೆ ವರದಿ ವಾಚಿಸಿದರು. ಎಕೆಪಿಎ ಜಿಲ್ಲಾ ಸ್ಪೋಟ್ಸ್ ಕೋರ್ಡಿನೇಟರ್ ರತೀಶ್ ರಾಮು, ಎಕೆಪಿಎ ಜಿಲ್ಲಾ ನೇಚರ್ ಕ್ಲಬ್ ಸಬ್ ಕೋರ್ಡಿನೇಟರ್ ಸಂಜೀವ ರೈ, ಎಕೆಪಿಎ ವಲಯ ಬ್ಲಡ್ ಡೋನರ್ಸ್ ಕ್ಲಬ್ ಸಬ್ ಕೋರ್ಡಿನೇಟರ್ ಸುರೇಶ್ ಬಿ.ಜೆ. ವಲಯ ಕೋಶಾಧಿಕಾರಿ ಮನು ಎಲ್ಲೋರ, ಶ್ರೀಜಿತ್ ಯೂನಿಟ್ ಪಿ.ಆರ್.ಒ ಶ್ರೀ ವಾಸು ಎ, ಸದಸ್ಯರಾದ ಶ್ರೀ ಚಂದ್ರಶೇಖರ ಎಂ, ರತೀಶ್ ಬಿ.ಕೆ ಉಪಸ್ಥಿತರಿದ್ದರು. ಯೂನಿಟ್ ಸದಸ್ಯೆ ಶಾಲಿನಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಮ್ಮೇಳನದಲ್ಲಿ ಯೂನಿಟ್ ಉಪಾಧ್ಯಕ್ಷ ಅಮಿತ್ ಅನುಸ್ಮರಣೆ ವಾಚಿಸಿದರು. ಯೂನಿಟ್ ಕಾರ್ಯದರ್ಶಿ ವಿಶಾಖ್ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಗಣೇಶ್ ರೈ ಲೆಕ್ಕಪತ್ರ ಮಂಡಿಸಿದರು. *
ಈ ಸಂದರ್ಭ 2025-26 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು. ವಸಂತ್ ಕೆರೆಮನೆ ಅಧ್ಯಕ್ಷ, ಅಭಿಷೇಕ್ ಸಿ ಉಪಾಧ್ಯಕ್ಷ, ಶಾಲಿನಿ ರಾಜೇಂದ್ರನ್ ಕಾರ್ಯದರ್ಶಿ, ಪದ್ಮನಾಭನ್ ನಾಯರ್ ಜತೆಕಾರ್ಯದರ್ಶಿ, ಅಮಿತ್ ಕೋಶಾಧಿಕಾರಿ, ವಿನೋದ್ ಪಿ.ಆರ್.ಒ, ಮೈಂದಪ್ಪ ಎಂ, ಸುಬ್ರಹ್ಮಣ್ಯ ವಿಡಿಯೋನಿಕ್ಸ್, ಮನು ಎಲ್ಲೋರ, ಗಣೇಶ್ ರೈ ಇವರನ್ನು ವಲಯ ಸಮಿತಿಗೂ, ರತೀಶ್ ರಾಮು ಇವರನ್ನು ಯೂನಿಟ್ ಸಮಿತಿಗೂ ಆಯ್ಕೆ ಮಾಡಲಾಯಿತು.
ಸಮ್ಮೇಳನದಲ್ಲಿ ಯೂನಿಟ್ ಕಾರ್ಯದರ್ಶಿ ವಿಶಾಖ್ ಸ್ವಾಗತಿಸಿದರು. ಜತೆಕಾರ್ಯದರ್ಶಿ ಅಭಿಷೇಕ್ ವಂದಿಸಿದರು.





