ಕಾಸರಗೋಡು: ವಾಹನಗಳನ್ನು ಬಾಡಿಗೆಗೆ ಪಡೆದು, ನಂತರ ಇವುಗಳನ್ನು ರಾಜ್ಯದಿಂದ ಹೊರಕ್ಕೆ ಸಾಗಿಸಿ ಮಾರಾಟಮಾಡುವ ಜಾಲದ ಪ್ರಮುಖ ವ್ಯಕ್ತಿ, ಕಾಸರಗೋಡು ಉಳಿಯತ್ತಡ್ಕ ಎಸ್.ಪಿ ನಗರ ನಿವಾಸಿ ಅಬ್ದುಲ್ ಅಶ್ಪಾಕ್ ಎಂಬಾತನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ ವಿಜಯಭರತ್ ರೆಡ್ಡಿ ಅವರ ನೇತೃತ್ವದ ವಿಶೇಷ ತಂಡ ಬಂಧಿಸಿದೆ. ಎಎಸ್‍ಪಿ ಡಾ. ನಂದಗೋಪಾಲನ್ ನೇತೃತ್ವದಲ್ಲಿ ಮಂಜೇಶ್ವರ, ವಿದ್ಯಾನಗರ, ಕುಂಬಳೆ ಪೊಲೀಸ್ ಠಾಣೆಗಳ ಇನ್ಸ್‍ಪೆಕ್ಟರ್‍ಗಳು ಹಾಗೂ ಕಾಸರಗೋಡು ಸಬ್‍ಡಿವಿಶನ್ ಪೊಲೀಸ್ ಸ್ಕ್ವೇಡ್ ಒಳಗೊಂಡ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.
ವಾಃನಗಳನ್ನು ಬಾಡಿಗೆಗೆ ಪಡೆದು,ಅವುಗಳನ್ನು ಹೊರ ರಾಜ್ಯಗಳಿಗೆ ಸಾಗಿಸಿ ಅಲ್ಲಿ ವಾಹನಮಾರಾಟ ದಂಧೆಯ ಏಜೆಂಟ್‍ಗಳಿಗೆ ಹಸ್ತಾಂತರಿಸುತ್ತಿದ್ದನು. ನಂತರ ವಾಹನ ಮಾಲಿಕರಿಗೆ ಬೆದರಿಕೆಯನ್ನೂ ಒಡ್ಡುತ್ತಿದ್ದನು. ವಾಹನ ಬಾಡಿಗೆಗೆ ಪಡೆದು, ಇತರ ರಾಜ್ಯಕ್ಕೆ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾನಗರ ಠಾಣೆಯಲ್ಲಿ ಹೊಸದಾಗಿ ಕೇಸು ದಾಖಲಾಗಿದೆ. ಅಲ್ಲದೆ ಸಮಾನ ಪ್ರಕರಣದ ಇನ್ನೊಂದು ಕೇಸು ಕುಂಬಳೆ ಠಾಣೆಯಲ್ಲೂ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನನ್ನು ಸ್ಪೆಶ್ಯಲ್ ಸಬ್‍ಜೈಲಿನಲ್ಲಿಸಲಾಗಿದೆ.




