ಕಾಸರಗೋಡು: ಕ್ರೀಡಾ ಸಮವಸ್ತ್ರ ವಿಷಯದ ಬಗ್ಗೆ ಕುಂಡಂಗುಳಿಯಲ್ಲಿ ಶಾಲಾ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ ನಡೆದಿದ್ದು, ಪೊಲೀಸರ ಮಧ್ಯ ಪ್ರವೇಶದಿಂದ ತಂಡವನ್ನು ಚದುರಿಸಿದ್ದಾರೆ. ಕುಂಡಂಗುಯಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳು ವಿಭಿನ್ನ ಕ್ರೀಡಾಸಮವಸ್ತ್ರದೊಂದಿಗೆ ಆಗಮಿಸಿದಾಗ ಶಾಲಾ ಅಧಿಕಾರಿಗಳು ಇದಕ್ಕೆ ತಡೆಯೊಡ್ಡಿದ್ದರು.
ಇದೇ ವಿಷಯದಲ್ಲಿ ಪ್ಲಸ್‍ವನ್ ಹಾಗೂ ಪ್ಲಸ್ ಟು ವಿದ್ಯಾರ್ಥಿಗಳ ಕುಂಡಂಗುಯಿ ಪೇಟೆಯಲ್ಲಿ ಪರಸ್ಪರ ಘರ್ಷಣೆಯಲ್ಲಿ ನಿರತರಾಗಿದ್ದು, ಈ ಸಂದರ್ಭ ಸ್ಥಳೀಯ ನಿವಾಸಿಗಳು ಹಾಗೂ ಚಾಲಕರು ಮಧ್ಯ ಪ್ರವೇಶಿಸಿ ಘರ್ಷನೆ ನಿಯಂತ್ರಿಸಲು ಮುಂದಾದರೂ, ವಿದ್ಯಾರ್ಥಿಗಳು ಇವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಬೇಡಡ್ಕ ಠಾಣೆ ಪೊಲೀಸರು ವಿದ್ಯಾರ್ಥಿಗಳನ್ನು ಚದುರಿಸಿದ್ದಾರೆ.




