ಬದಿಯಡ್ಕ: ರೋಟರಿ ಇಂಟರ್‍ನೇಶನಲ್ ಬದಿಯಡ್ಕ ಹಾಗೂ ಚಿತ್ತಿಲಪಿಲ್ಲಿ ರೋಟರಿ ಇದರ ವತಿಯಿಂದ ಬಡಜನತೆಗೆ ನಿರ್ಮಿಸಿ ನೀಡುವ `ಕನಸಿನ ಮನೆ ಯೋಜನೆಯ' ಕೀಲಿಕೈ ಹಸ್ತಾಂತರ ಕಾರ್ಯಕ್ರಮ ಮಾನ್ಯ ಪರಿಸರದಲ್ಲಿ ಫಲಾನುಭವಿ ಚನಿಯಪ್ಪ ಪೂಜಾರಿ ಮತ್ತು ಪ್ರೇಮಲತಾ ದಂಪತಿಗಳಿಗೆ ಹಾಗೂ ಪಿಲಿಕೂಡ್ಲು ನಿವಾಸಿಗಳಾದ ದಿಲೀಪ್ ಮತ್ತು ಉಷಾಕುಮಾರಿ ದಂಪತಿಗಳಿಗೆ ಮಂಗಳವಾರ ಹಸ್ತಾಂತರಿಸಲಾಯಿತು.
3204 ಜಿಲ್ಲಾ ಗವರ್ನರ್ ಬಿಜೋಶ್ ಮೇನ್ಯುವಲ್ ಕೀಲಿಕೈ ವಿತರಿಸಿ ಮಾತನಾಡಿ, ರೋಟರಿ ಘಟಕವು ಉತ್ತಮವಾದ ಕಾರ್ಯದ ಮೂಲಕ ಬಡಜನತೆಗೆ ನೆರವಾಗುವ ರೋಟರಿಯ ಉದ್ದೇಶವನ್ನು ಸಾಕಾರಗೊಳಿಸಿದ್ದಾರೆ. ಇದಕ್ಕೆ ಕಾರಣರಾದ ಬದಿಯಡ್ಕ ಘಟಕದ ಕಾರ್ಯ ಶ್ಲಾಘನೀಯ ಎಂದರು.
ಉಪ ಗವರ್ನರ್ ಶಿವದಾಸ್ ಕೀನೇರಿ, ಸಂಚಾಲಕ ರಾಜೇಶ್ ಕಾಮತ್, ಜಿಜಿಆರ್ ಗೋಕುಲ್ ಚಂದ್ರಬಾಬು, ರೋಟರಿ ಬದಿಯಡ್ಕದ ಅಧ್ಯಕ್ಷ ಕೇಶವ ಬಿ., ಕಾರ್ಯದರ್ಶಿ ರಮೇಶ್ ಆಳ್ವ ಕಡಾರು, ಕೋಶಾಧಿಕಾರಿ ಗೋಪಾಲಕೃಷ್ಣ ಕಾಮತ್ ಹಾಗೂ ಸದಸ್ಯರು, ಸ್ಥಳೀಯ ಜನಪ್ರತಿನಿಧಿ ಶ್ಯಾಮಪ್ರಸಾದ ಮಾನ್ಯ, ನಾಗರಿಕರು ಪಾಲ್ಗೊಂಡಿದ್ದರು.




