ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮೀಯೊಪದವು ಮದಂಗಲ್ಲು ನಿವಾಸಿ ಸುಬ್ಬಣ್ಣ ಭಟ್(86)ಸ್ವಯಂ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದಿದ್ದಾರೆ. ಶುಕ್ರವಾರ ಮನೆಯಲ್ಲಿ ಕೃತ್ಯವೆಸಗಿದ್ದು, ಈ ಸಂದರ್ಭ ಪತ್ನಿ ಮನೆಯಲ್ಲಿದ್ದರು.
ಸುಬ್ಬಣ್ಣ ಭಟ್ ಹಾಗೂ ಇವರ ಪತ್ನಿ ರಾಜಮ್ಮಾಳ್ ಅವರಿಗೆ ದೀರ್ಘ ಕಾಲದ ಅಸೌಖ್ಯವಿದ್ದು, ಇದರಿಂದ ಮನ ನೊಂದು ಕೃತ್ಯವೆಸಗಿರುವುದಾಗಿ ಸಂಶಯಿಸಲಾಗಿದೆ. ಸುಬ್ಬಣ್ಣ ಭಟ್ ಮತ್ತು ಇವರ ಪತ್ನಿ ಮಾತ್ರ ಮನೆಯಲ್ಲಿ ವಾಸವಿದ್ದಾರೆ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.





