ಕಾಸರಗೋಡು: ಪೆರಿಯ ಆಯಂಕಡವು ಎಂಬಲ್ಲಿ ಯುವಕನೊಬ್ಬ ಸೇತುವೆಯಿಂದ ಹೊಳೆಗೆ ಜಿಗಿದು ನೀರುಪಾಲಾಗಿರುವ ಸಂಶಯದಲ್ಲಿ ಬೇಡಡ್ಕ, ಬೇಕಲ ಠಾಣೆ ಪೊಲೀಸ್, ಅಗ್ನಿಶಾಮಕದಳ ಹಾಗೂ ಸ್ಥಳೀಯ ನಾಗರಿಕರು ವ್ಯಾಪಕ ಹುಡುಕಾಟದಲ್ಲಿ ನಿರತರಾಗಿದ್ದಾರೆ.
ಉದುಯಪುರಂ ತಡಿಯಂವಳಪ್ಪು ನಿವಾಸಿ ಸಜಿತ್‍ಲಾಲ್ ಎಂಬವರು ನಾಪತ್ತೆಯಾಗಿರುವುದಾಗಿ ಸಂಶಯಿಸಲಾಗಿದೆ. ಶುಕ್ರವಾರ ಘಟನೆ ನಡೆದಿದ್ದು, ಯುವಕನದ್ದೆನ್ನಲಾದ ಚಪ್ಪಲಿ ಹಾಗೂ ಸ್ಕೂಟರ್ ಸೇತುವೆ ಸನಿಹದಿಂದ ಪತ್ತೆಹಚ್ಚಲಾಗಿದೆ. ಅಮೆರಿಕಕ್ಕಿರುವ ಜಾಬ್ ವಿಸಾ ಪಡೆಯಲು ವಿಫಲವಾಗಿದ್ದರೆನ್ನಲಾಗಿದೆ. ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




