ಕಾಸರಗೋಡು: ಪರಿಶಿಷ್ಟ ಜಾತಿ ಇಲಾಖೆ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ವೆಲ್ಲಚ್ಚಲ್ ಬಾಲಕರ ಸರ್ಕಾರಿ ಮಾದರಿ ವಸತಿ ಶಾಲೆಯಲ್ಲಿ ಕೌನ್ಸಿಲರ್ (ಆಪ್ತ ಸಮಾಲೋಚಕಾ) ಹುದ್ದೆ ಗೆ ಅರ್ಜಿ ಆಹ್ವಾನಿಸಲಾಗಿದೆ.
ಮನೋವಿಜ್ಞಾನ, ಸಮಾಜಕಾರ್ಯ ಅಥವಾ ಸಮಾಜವಿಜ್ಞಾನ ಎಂಬೀ ವಿಷಯಗಳಲ್ಲಿ ಸ್ಥಾತಕೋತ್ತರ ಪದವಿ ಹೊಂದಿರುವ ಹಾಗೂ ಕೌನ್ಸಿಲರ್ ಹುದ್ದೆಯಲ್ಲಿ ಅನುಭವ ಹೊಂದಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಇವರ ಅನುಪಸ್ಥಿತಿಯಲ್ಲಿ ಉಳಿದ ವರ್ಗದ ಅಭ್ಯರ್ಥಿಗಳಿಂದ ಪಡೆದ ಅರ್ಜಿಯನ್ನು ಪರಿಗಣಿಸಲಾಗುವುದು. ಸಂದರ್ಶನವು ಅಕ್ಟೋಬರ್ 6 ಕ್ಕೆ ಬೆಳಗ್ಗೆ 10.30 ಕ್ಕೆ ಕಾಸರಗೋಡು ಸಿವಿಲ್ ಸ್ಟೇಷನ್‍ನ ಪರಿಶಿಷ್ಟ ಜಾತಿ ಇಲಾಖೆ ಕಚೇರಿಯಲ್ಲಿ ನಡೆಯಲಿರುವುದಾಘಿ ಪ್ರಕಟಣೆ ತಿಳಿಸಿದೆ.

