ಕಾಸರಗೋಡು: ಐತಿಹಾಸಿಕ ಮತ್ತು ಸಾಂಸ್ಕøತಿಕ ವೈಶಿಷ್ಟ್ಯಗಳಿಂದ ವಿಶ್ವ ಪ್ರವಾಸೋದ್ಯಮ ನಕ್ಷೆಯಲ್ಲಿ ಸ್ಥಾನ ಪಡೆದಿರುವ ಬೇಕಲ್‍ನಲ್ಲಿ ಬೇಕಲ್ ಇಂಟನ್ರ್ಯಾಷನಲ್ ಬೀಚ್ ಫೆಸ್ಟ್ 2025 ರ ಮೂರನೇ ಆವೃತ್ತಿ ಡಿಸೆಂಬರ್ 21 ರಿಂದ 31 ರವರೆಗೆ ಜರುಗಲಿದೆ. ಕಲೆ ಮತ್ತು ಸಂಸ್ಕೃತಿ ಉತ್ಸವ ಮತ್ತು ಗುಣಮಟ್ಟದ ಪ್ರವಾಸೋದ್ಯಮ ಮೇಳ ಆಯೋಜಿಸಲು ಸರ್ಕಾರ ತೀರ್ಮಾನಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಬೇಕಲ್ ಅಂತರರಾಷ್ಟ್ರೀಯ ಬೀಚ್ ಉತ್ಸವ ಎಂಬ ಹೆಸರಿನಲ್ಲಿ ಆಯೋಜಿಸಲಾದ ಕಾರ್ಯಕ್ರಮವು ಕಾಸರಗೋಡು ಜಿಲ್ಲೆಗೆ ಹೊಸ ಮತ್ತು ಅದ್ಭುತ ಅನುಭವವಾಗಿದ್ದು, ಇದನ್ನು ಆಚರಿಸಲು ಲಕ್ಷಾಂತರ ಜನರು ಒಂದೇ ಹೃದಯದಿಂದ ಒಟ್ಟುಗೂಡಿದ್ದಾರೆ ಎಂದು ಶಾಸಕ ಸಿ.ಎಚ್ ಕುಞಂಬು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೇಕಲ್ ರೆಸಾಟ್ರ್ಸ್ ಅಭಿವೃದ್ಧಿ ನಿಗಮ(ಬಿಆರ್‍ಡಿಸಿ), ಕುಟುಂಬಶ್ರೀ, ಕಾಸರಗೋಡು ಜಿಲ್ಲೆಯ ಸ್ಥಳೀಯ ಸರ್ಕಾರಿ ಸಂಸ್ಥೆಗಳು, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಮತ್ತು ಜಿಲ್ಲೆಯ ಕಲೆ ಮತ್ತು ಸಾಂಸ್ಕøತಿಕ ಗುಂಪುಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಾಯದೊಂದಿಗೆ ಉತ್ಸವ ಆಚರಿಸಲಾಗುತ್ತಿದೆ.
ಮೂರನೇ ಆವೃತ್ತಿಯ ಉತ್ಸವವನ್ನು ಸಹ ಅದೇ ರೀತಿಯಲ್ಲಿ ಆಯೋಜಿಸಲಾಗುವುದು. ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿ ರಚನಾ ಸಭೆ ಸೆ. 26ರಂದು ಮಧ್ಯಾಹ್ನ 3ಕ್ಕೆ ಬೇಕಲ್ ಬೀಚ್ ಪಾರ್ಕ್‍ನಲ್ಲಿ ಜರುಗಲಿರುವುದಾಗಿ ತಿಳಿಸಿದ್ದಾರೆ.

