ಬದಿಯಡ್ಕ: ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ನೂತನ ಮುಖಮಂಟಪ ಲೋಕಾರ್ಪಣೆ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವವು ಇಂದು(ಸೆ.14ರಂದು) ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಸೆ.13ರಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸರ್ಧೆಗಳು ಜರಗಲಿವೆ. ಬೆಳಗ್ಗೆ 7ರಿಂದ ಸಂಗೀತಾರ್ಚನೆ ಕು. ಶಿವಪ್ರಿಯಾ ಪಿಲಾಂಕಟ್ಟ ಹಾಗೂ ಸಂಗಡಿಗರಿಂದ, 8ಕ್ಕೆ ದ್ವಾದಶ ನಾಳೀಕೇರ ಶ್ರೀ ಮಹಾಗಣಪತಿ ಹೋಮ, ಪೂರ್ಣಾಹುತಿ, ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಅವರಿಂದ ದೀಪಪ್ರಜ್ವಲನೆ, 8.30ಕ್ಕೆ ಪೂಜೆ, 8.35ರಿಂದ ಚಪ್ಪರ ಮದುವೆ, ತುಲಾಭಾರ ಸೇವೆ, 8.40ರಿಂದ ತುಳಸಿಹಾರ ನೇಯುವ ಸ್ಪರ್ಧೆ ಮಹಿಳೆಯರಿಗೆ, 8.50ರಿಂದ ಕುಮಾರಿ ವೇದಿತಾ ಪದ್ಮಾರು ಮತ್ತು ಪಾಂಚಜನ್ಯ ಬಾಲಗೋಕುಲದ ವತಿಯಿಂದ ಮೊಸರುಕುಡಿಕೆ ಶಾಸ್ತ್ರೀಯ ಪ್ರಸ್ತುತಿ, 9 ರಿಂದ ವಿವಿಧ ಭಜನಾ ತಂಡಗಳಿಂದ ಭಜನೆ, ಪಾಂಚಜನ್ಯ ಸಾಂಸ್ಕøತಿಕ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ವಿಹಿಂಪ ಜಿಲ್ಲಾಧ್ಯಕ್ಷ ಜಯದೇವ ಖಂಡಿಗೆ ಉದ್ಘಾಟಿಸುವರು.
ಸ್ವಾಗತ ಸಮಿತಿ ಉಪಾಧ್ಯಕ್ಷ ಉದಯ ಭಟ್ ಕೋಳಿಕ್ಕಜೆ, ನಿವೃತ್ತ ಮುಖ್ಯೋಪಾಧ್ಯಾಯ ಸುವರ್ಣ ಮಾಸ್ತರ್ ಅಗಲ್ಪಾಡಿ, ಧಾರ್ಮಿಕ ಮುಂದಾಳು ಐತ್ತಪ್ಪ ಮವ್ವಾರು, ಯಕ್ಷಪೋಷಕ ರವೀಂದ್ರನಾಥ ಭಂಡಾರಿ ನಾರಂಪಾಡಿ, ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ ಸೇವಾಸಮಿತಿಯ ಪ್ರಧಾನ ಕಾರ್ಯದರ್ಶಿ ನಿರಂಜನ ಮಾಸ್ತರ್ ಪೆರಡಾಲ ಉಪಸ್ಥಿತರಿರುವರು. 9.30ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದುಷಿ ವಾಣಿಪ್ರಸಾದ್ ಕಬೆPಕ್ಕೋಡು ಇವರ ಸುನಾದ ಸಂಗೀತ ಕಲಾಶಾಲೆ ಬದಿಯಡ್ಕದ ವಿದ್ಯಾರ್ಥಿಗಳಾದ ಪ್ರದ್ಯುಮ್ನ ಶರ್ಮ ಉಪ್ಪಂಗಳ ಮತ್ತು ನಂದನ ಶರ್ಮ ಪಂಜಿತ್ತಡ್ಕ, 11ಕ್ಕೆ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಶ್ರೀ ಮಂದಿರಕ್ಕೆ ಮುದ್ದುಕೃಷ್ಣ ರಾಧೆಯರ ವೇಷದೊಂದಿಗೆ ಶೋಭಾಯಾತ್ರೆ, 11ರಿಂದ 12ರ ತನಕ ರಾಷ್ಟ್ರಮಟ್ಟದ ಗಾಯಕ ರಾಘವೇಂದ್ರ ಕಿಗ್ಗಾ ಶೃಂಗೇರಿ ಇವರಿಂದ ಭಕ್ತಿಭಾವ ಗಾನಯಾನ, 12ರಿಂದ ಬಳ್ಳಪದವು ವೀಣಾವಾದಿನಿ ತಂಡದಿಂದ ಗಾನ ಮಾಧುರ್ಯಂ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ. ಅಪರಾಹ್ನ 2 ರಿಂದ ಧಾರ್ಮಿಕ ಸಭೆ ನಡೆಯಲಿದೆ. ಜನ್ಮಾಷ್ಟಮಿ ಮತ್ತು ಮುಖಮಂಟಪ ಲೋಕಾರ್ಪಣಾ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ತಲೇಕ ಅಧ್ಯಕ್ಷತೆ ವಹಿಸಲಿರುವರು. ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಘನ ಉಪಸ್ಥಿತಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರತಿ ಮುರುಳ್ಯ ಉದ್ಘಾಟಿಸಲಿದ್ದಾರೆ. ನೋಟರಿ ವಕೀಲ ಸಂಕಪ್ಪ ಪೂಜಾರಿ ಉಡುಪಿ, ಮಾಜಿಮೇಯರ್ ಶಂಕರ ಭಟ್ ಮಂಗಳೂರು, ಉದ್ಯಮಿ ಶಿವಶಂಕರ ನೆಕ್ರಾಜೆ, ದಂತವೈದ್ಯ ಡಾ. ಮನೋಹರ್ ಎಂ.ಜಿ. ಮುಳ್ಳೇರಿಯ, ನಿವೃತ್ತ ಡೆಪ್ಯೂಟಿ ಸೂಪರಿಡೆಂಟ್ ಪೊಲೀಸ್ ಕೆ.ಪಿ. ಮೋಹನ್‍ದಾಸ್, ಶ್ರೀರಾಮಚಂದ್ರಾಪುರ ಮಠದ ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮುಳ್ಳೇರಿಯ ಹವ್ಯಕ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಚಂದ್ರಶೇಖರ್ ಎ.ಎಸ್.ಐ. ಮಂಗಳೂರು, ಜ್ಯೋತಿಷಿ ಕೃಷ್ಣಮೂರ್ತಿ ಪುದುಕೋಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರುಗಳಾದ ಸತ್ಯನಾರಾಯಣ ಭಟ್ ಆನೆಮಜಲು, ವಾಸುದೇವ ಭಟ್ ಉಪ್ಪಂಗಳ, ಡಾ. ಕಿಶೋರ್ ಕುಣಿಕುಳ್ಳಾಯ, ವಕೀಲ ನಾರಾಯಣ ಭಟ್ ಮವ್ವಾರು, ಗೋಪಾಲಕೃಷ್ಣ ಪೈ ಬದಿಯಡ್ಕ, ಗಿರೀಶ್ ಕುಣಿಕುಳ್ಳಾಯ ಕೊಯಂಬತ್ತೂರು, ಮಧುಸೂದನ ಆಯರ್ ಮಂಗಳೂರು, ನಿತ್ಯಾನಂದ ಶೆಣೈ ಬದಿಯಡ್ಕ, ವಕೀಲ ರವಿಚಂದ್ರ ಮಂಗಳೂರು, ವಸಂತ ಚೇಂಬೋಡು, ಸಂಜೀವ ಶೆಟ್ಟಿ ಮೊಟ್ಟೆಕುಂಜ ಗೌರವ ಉಪಸ್ಥಿತರಿರುವರು. ಹರೀಶ್ ಗೋಸಾಡ, ಡಾ. ವೇಣುಗೋಪಾಲ ಕಳೆಯತ್ತೋಡಿ, ವೆಂಕಟರಮಣ ಮಾಸ್ತರ್ ಉಪ್ಪಂಗಳ, ಹರಿನಾರಾಯಣ ಮಾಸ್ತರ್ ಅಗಲ್ಪಾಡಿ, ಆನಂದ ಕೆ.ಮವ್ವಾರು, ಪ್ರಶಾಂತ್ ಕುಣಿಕುಳ್ಳಾಯ ಉಬ್ರಂಗಳ, ಹರಿಪ್ರಸಾದ ಸ್ಕಂದ, ಮುರಳಿ ಮಧೂರು, ಕರಿಯಪ್ಪ ಮಾರ್ಪನಡ್ಕ, ಬಾಬು ಮಾಸ್ತರ್ ಅಗಲ್ಪಾಡಿ, ಸುದಾಮ ಪದ್ಮಾರು, ವಸಂತಿ ಟೀಚರ್ ಅಗಲ್ಪಾಡಿ, ಪ್ರೊ.ಎ.ಶ್ರೀನಾಥ್, ರಮೇಶ್ ಕೃಷ್ಣ ಪದ್ಮಾರು, ರಾಜೇಶ್ ಮಾಸ್ತರ್ ಅಗಲ್ಪಾಡಿ, ಲಾವಣ್ಯ ಗಿರೀಶ್ ಅಗಲ್ಪಾಡಿ ಮೊದಲಾದವರು ಪಾಲ್ಗೊಳ್ಳಲಿರುವರು. ಸಂಜೆ 5 ರಿಂದ 6.30ರ ತನಕ ಕು. ಆತ್ಮಶ್ರೀ ಎಂ ಹಾಗೂ ಕು. ಆದಿಶ್ರೀ ಸಹೋದರಿಯರು ಅಳಕೆಮಜಲು, ಪುತ್ತೂರು ಇವರಿಂದ ಗಾನ ಸಂಭ್ರಮ, 6.30 ರಿಂದ 8ರ ತನಕ ನಾಟ್ಯನಿಲಯಂ ಕಲಾತಪಸ್ವಿ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಇವರ ಶಿಷ್ಯೆ ನೃತ್ಯ ವಿದುಷಿ ಅಪೂರ್ವಾ ಪಾವೂರು ಮತ್ತು ಬಳಗದವರಿಂದ ನೃತ್ಯ ಕೃಷ್ಣಂ, 8 ರಿಂದ 8.30ರ ತನಕ ಕು. ಅಭಿಜ್ಞಾ ಕರಂದಕ್ಕಾಡ್ ಕಾಸರಗೋಡು ಇವರಿಂದ ಯೋಗಾಸನಾ ಪ್ರಸ್ತುತಿ, 8.30ರಿಂದ 9 ವಿದುಷಿ ಸೌರಮ್ಯ ಸಿಜು ತನ್ಮಯ್ ಸ್ಕೂಲ್ ಆಫ್ ಡ್ಯಾನ್ಸ್ ಮ`Àೂರು ಇವರಿಂದ ಕುಮಾರಿ ಸ್ನೇಹಾ ನಾರಾಯಣನ್ ಕಾಟುಕುಕ್ಕೆ `ನಾಟ್ಯರಂಜನಾ', 9 ರಿಂದ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ, 10.30ಕ್ಕೆ ಮಹಾಪೂಜೆ ನಡೆಯಲಿದೆ.




.jpg)
.jpg)
