ಕಾಸರಗೋಡು: ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಶ್ರೀಕೃಷ್ಣಾಷ್ಟಮಿ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಸ್ವಾಮಿ ವಿವಿಕ್ತಾನಂದ ಸರಸ್ವತಿ ಉದ್ಘಾಟಿಸಿದರು.
ಶ್ರೀಕೃಷ್ಣನು ಜೀವನದ ಸರ್ವೋತ್ತಮ ಮಾರ್ಗದರ್ಶಿ. ಅವರ ಜೀವನವು ಧರ್ಮನಿಷ್ಠೆಯ ಮತ್ತು ಭಕ್ತಿಯ ಪ್ರತೀಕವಾಗಿದೆ ಎಂದು ಸ್ವಾಮೀಜಿ ತಮ್ಮ ಸಂದೇಶದಲ್ಲಿ ತಿಳಿಸಿದರು.
ಭಗವಾನ್ ಶ್ರೀಕೃಷ್ಣನ ಜೀವನ ಮತ್ತು ಸಂದೇಶಗಳನ್ನು ಒಳಗೊಂಡಂತೆ ಉರಿಯಡಿ ಸ್ಪರ್ಧೆ, ವೇಷಭೂಷಣ, ಚಿತ್ರಕಲೆ ಸ್ಪರ್ಧೆ ಮೊದಲಾದವು ದಿನವನ್ನು ಇನ್ನಷ್ಟು ರಂಗಿನಗೊಳಿಸಿತು. ಬಾಲಗೋಪಾಲ ವೇಷಶೋಭಾಯಾತ್ರೆ ವಿಶೇಷ ಆಕರ್ಷಣೆಯಾಗಿತ್ತು. ರಾಧಾ-ಕೃಷ್ಣ ವೇಷದಲ್ಲಿ ಅಲಂಕರಿಸಿದ್ದ ಸುಮಾರು 200ಕ್ಕೂ ಹೆಚ್ಚು ಮಕ್ಕಳಿಗೆ ಸ್ವಾಮೀಜಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಪ್ರಾಂಶುಪಾಲ ಸುಕುಮಾರನ್ ವಿದ್ಯಾರ್ಥಿಗಳಿಗೆ ಶುಭಾಶಂಸನೆಗೈದು ಇಂತಹ ಆಚರಣೆಗಳು ಮಕ್ಕಳಲ್ಲಿ ಸಾಂಸ್ಕøತಿಕ ಮೌಲ್ಯಗಳನ್ನು ಬೆಳೆಸಲು ಮಹತ್ತರವಾದ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹರ್ಷಭರಿತವಾಗಿ ಪಾಲ್ಗೊಂಡರು.




.jpeg)
.jpeg)
