"ಜೋರ್ಡಾನ್ ನದಿಯ ಪಶ್ಚಿಮಕ್ಕೆ ಯಾವುದೇ ಫೆಲೆಸ್ತೀನ್ ರಾಷ್ಟ್ರ ಇರುವುದಿಲ್ಲ" ಎಂದು ಬೆಂಜಮಿನ್ ನೆತನ್ಯಾಹು ಹೇಳಿಕೆಯಲ್ಲಿ ತಿಳಿಸಿದ್ದಾರೆ. ನೆತನ್ಯಾಹು ಹೇಳಿಕೆಯು ಇಸ್ರೇಲ್ ಸರಕಾರದ ಯುದ್ಧ ಗುರಿಗಳನ್ನು ಮತ್ತಷ್ಟು ಪ್ರತಿಬಿಂಬಿಸುತ್ತದೆ.
ಫೆಲೆಸ್ತೀನ್ ರಾಷ್ಟ್ರ ಇರುವುದಿಲ್ಲ, ನಮ್ಮ ಭೂಮಿಯ ಮಧ್ಯದಲ್ಲಿ ಭಯೋತ್ಪಾದಕ ರಾಜ್ಯವನ್ನು ಬಲವಂತವಾಗಿ ರೂಪಿಸಲು ಮಾಡಿದ ಇತ್ತೀಚಿನ ಪ್ರಯತ್ನಕ್ಕೆ ನಾನು ಅಮೆರಿಕದಿಂದ ಹಿಂದಿರುಗಿದ ನಂತರ ಉತ್ತರ ನೀಡುತ್ತೇನೆ ಎಂದು ನೆತನ್ಯಾಹು ಹೇಳಿದ್ದಾರೆ.
"ಅಕ್ಟೋಬರ್ 7ರ ಭೀಕರ ಹತ್ಯಾಕಾಂಡದ ನಂತರ ಫೆಲೆಸ್ತೀನ್ ರಾಷ್ಟ್ರವನ್ನು ಗುರುತಿಸುತ್ತಿರುವ ನಾಯಕರಿಗೆ ನನಗೆ ಸ್ಪಷ್ಟ ಸಂದೇಶ, ನೀವು ಭಯೋತ್ಪಾದನೆಗೆ ದೊಡ್ಡ ಬಹುಮಾನವನ್ನು ನೀಡುತ್ತಿದ್ದೀರಿ. ಆದರೆ, ಅದು ಸಂಭವಿಸುವುದಿಲ್ಲ ಎಂಬ ಇನ್ನೊಂದು ಸಂದೇಶವನ್ನು ನಾನು ನಿಮಗೆ ನೀಡುತ್ತಿದ್ದೇನೆ. ಜೋರ್ಡಾನ್ ನದಿಯ ಪಶ್ಚಿಮಕ್ಕೆ ಯಾವುದೇ ಫೆಲೆಸ್ತೀನ್ ರಾಷ್ಟ್ರ ಇರುವುದಿಲ್ಲ. ಹಲವು ವರ್ಷಗಳಿಂದ, ದೇಶೀಯ ಮತ್ತು ವಿದೇಶಗಳೆರಡರ ಅಪಾರ ಒತ್ತಡದ ನಡುವೆಯೂ ಆ ಭಯೋತ್ಪಾದಕ ರಾಜ್ಯದ ಸೃಷ್ಟಿಯನ್ನು ನಾನು ತಡೆದಿದ್ದೇನೆʼ ಎಂದು ನೆತನ್ಯಾಹು ಹೇಳಿದ್ದಾರೆ.




