ಕುಂಬಳೆ: ಕುಂಬಳೆ-ಮುಳ್ಳೇರಿಯ ಕೆಎಸ್‍ಟಿಪಿ ರಸ್ತೆಯ ಕುಂಬಳೆ ಭಾಸ್ಕರನಗರದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮೂಲತಃ ಕಾಸರಗೋಡು ಅಡ್ಕತ್ತಬಯಲು ನಿವಾಸಿ ಹಾಗೂ ಪ್ರಸಕ್ತ ಬೇಳದಲ್ಲಿ ವಾಸಿಸುತ್ತಿದ್ದ ಅಜಿತ್ (48)ಎಂಬವರು ಮೃತಪಟ್ಟಿದ್ದಾರೆ.
ಕುಂಬಳೆ ಪೇಟೆಯ ಟಯರ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು ಕೆಲಸ ಮುಗಿಸಿ ಮನೆಗೆ ತೆರಳುವ ದಾರಿಮಧ್ಯೆ, ಇವರು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಅಂಚಿನ ಕಿರುಸೇತುವೆಗೆ ಡಿಕ್ಕಿಯಾಗಿತ್ತು. ಈ ಸಂದರ್ಭ ಕಾರು ಪಲ್ಟಿಯಾಗಿ ಗಂಭೀರ ಗಾಯಗೊಂಡಿದ್ದ ಇವರನ್ನು ಸ್ಥಳೀಯರು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಸೋಮವಾರ ಸಾವು ಸಂಭವಿಸಿದೆ. ಕುಂಬಳೆ ಭಾಸ್ಕರ ನಗರದಲ್ಲಿ ಅಪಘಾತ ಮರುಕಳಿಸುತ್ತಿದ್ದು, ವಾಹನಚಾಲಕರಲ್ಲಿ ಆತಂಕ ಹುಟ್ಟಸುತ್ತಿದೆ.





