ಕಾಸರಗೋಡು: ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ದಸರಾದಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತಿರುವುದಾಗಿ , ಕಾನರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ತಿಳಿಸಿದ್ದಾರೆ.
ಅವರು ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಠ, ಮಂದಿರ, ದೇವಸ್ಥಾನ ಸೇರಿದಂತೆ ನಮ್ಮ ಆರಾಧನಾ ಕೇಂದ್ರಗಳು ಸಾಂಸ್ಕೃ ತಿಕ ಕೇಂದ್ರಗಳಾಗಬೇಕು. ಈ ನಿಟ್ಟಿನಲ್ಲಿ ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಸುಬ್ರಹ್ಮಣ್ಯ ದೇವಸ್ಥಾನ ಸಾಂಸ್ಕೃತಿಕ ಕೇಂದ್ರವಾಗಿ ಗುರುತಿಸಿಕೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು. ದೇವಸ್ಥಾನದ ಪಾತ್ರಿ ಪಾಂಗೋಡು ಪ್ರವೀಣ್ ನಾಯಕ ಅವರು ದೀಪ ಪ್ರಜ್ವಲನೆಗೈದರು. ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು ಅಧ್ಯಕ್ಷತೆ ವಹಿಸಿದ್ದರು. ಪಾಂಗೋಡು ಕ್ಷೇತ್ರ ನಮಿತಿಯ ಅಧ್ಯಕ್ಷ ನಾಗೇಶ್ ಪಿ.ನಾಯಕ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾ ಮತ್ತು ಕರ್ನಾಟಕ ರಾಜ್ಯ ಪ್ರಶಿಕ್ಷಣ ಪ್ರಕೋಷ್ಠ ಕರ್ನಾಟಕ ಘಟಕ ಅಧ್ಯಕ್ಷೆ ಡಾ.ಮಂಜುಳಾ ಅನಿಲ್ ರಾವ್ ಗೌರವ ಉಪಸ್ಥಿತರಿದ್ದರು. ಧಾರ್ಮಿಕ ಮುಂದಾಳು, ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟಂ, ಹಿರಿಯ ಪತ್ರಕರ್ತ ಪ್ರದೀಪ್ ಬೇಕಲ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಮಿತಿ ಸದಸ್ಯ ಅಖಿಲೇಶ್ ನಗುಮುಗಂ, ಕನಾಪ ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಪತ್ರಕರ್ತರಾದ ಜಗನ್ನಾಥ ಶೆಟ್ಟಿ, ವೀಜಿ ಕಾಸರಗೋಡು, ಕರಾವಳಿ ಸಾಂಸ್ಕೃ ತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಪುತ್ತೂರು ನಗರಸಭಾ ಸದಸ್ಯ ಸಂತೋಷ್ ಪುತ್ತೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ.ವಾಮನ ರಾವ್ ಬೇಕಲ್ ಸ್ವಾಗತಿಸಿದರು. ಸಂಘಟಕ ಕೆ. ಜಗದೀಶ್ ಕೊಡ್ಡು ಕಾರ್ಯಕ್ರಮ ನಿರೂಪಿಸಿದರು. ವನಂತ ಕೆರೆಮನೆ ವಂದಿಸಿದರು. ಇದೇ ಸಂದರ್ಭ 12ನೇ ವರ್ಷದ ದಸರಾ ಸಂಕೀರ್ತನಾ ದಶಾಹವನ್ನು ಸಂಕೀರ್ತನ ಸಾಮ್ರಾಟ್ ಜಯಾನಂದಕುಮಾರ್ ಹೊಸದುರ್ಗ ಹಾಡಿನ ಮೂಲಕ ಉದ್ಘಾಟಿಸಿದರು. ಪಾಂಗೋಡು ಕ್ಷೇತ್ರ ಸಾಂಸ್ಕøತಿಕ ಘಟಕ, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸಹಯೋಗ ಹಾಗೂ ಕನ್ನಡ ಭವನ ಮತ್ತು ಗ್ರಂಥಾಲಯ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಿತು.





