ಕಾಸರಗೋಡು: ಗಡಿನಾಡು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೆ. 28ರಂದು ನಡೆಯಲಿದೆ. ಕೆ.ಎಂ.ಸಿ.ಆಸ್ಪತ್ರೆ ಅತ್ತಾವರ ಮಂಗಳೂರು, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಇವರ ಸಹಯೋಗದಲ್ಲಿ ನಡೆಯುವ ಶಿಬಿರದಲ್ಲಿ ತಜ್ಞ ವೈದ್ಯರಾದ ಡಾಕ್ಟರ್ ಜೋಹಾನ್ ಸನ್ನಿ ಕನ್ಸಲೆಂಟ್ ಅಂಕಾಲಜಿಸ್ಟ್ ಕೆ.ಎಂ.ಸಿ .ಅತ್ತಾವರ ಇವರು ಕೇನ್ಸರ್ ಕುರಿತಾಗಿ ಮಾರ್ಗದರ್ಶನ ನೀಡಲಿದ್ದಾರೆ.
ಮಣಿಪಾಲ ಕೆ.ಎಂ.ಸಿ.ಯ ಹಿರಿಯ ವೈದ್ಯ, ಮಕ್ಕಳ ರೋಗ ತಜ್ಞ ಸುನಿಲ್ ಮುಂಡ್ಕೂರು ಸಮಾರಂಭ ಉದ್ಘಾಟಿಸುವರು. ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸುವರು. ಕಾಸರಗೋಡು ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ದಿನೇಶ್ ಬಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಶಿಬಿರದಲ್ಲಿ ಎಲುಬು ಮತ್ತು ಕೀಲು ರೋಗ, ಕಣ್ಣಿನ ವಿಭಾಗ, ಚರ್ಮರೋಗ ತಪಾಸಣೆ, ಸಾಮಾನ್ಯ ರೋಗ ವಿಭಾಗ, ಕಿವಿ ,ಮೂಗು ಮತ್ತು ಗಂಟಲು ವಿಭಾಗ, ಕ್ಯಾನ್ಸರ್ ತಪಾಸಣೆ, ಮಾಹಿತಿ, ಸ್ರೀರೋಗ ವಿಭಾಗ ಮತ್ತು ಮಕ್ಕಳ ತಪಾಸಣೆ ನಡೆಯಲಿದೆ. ವೈದ್ಯರ ಶಿಫಾರಸುಮಾಡಿದವರಿಗೆ ಇ.ಸಿ.ಜಿ.ವ್ಯವಸ್ಥೆಯು ಇರಲಿದೆ. ಎಫ್ .ಎಚ್ .ಸಿ .ಮಧೂರು, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಕಾಸರಗೋಡು ವಲಯ, ಕುತ್ಯಾಳ ನವ ಜೀವನ ಸಮಿತಿ ಕೂಡ್ಲು, ಶ್ರೀ ಮಹೇಶ್ವರಿ ಮಹಿಳಾ ಮಂಡಲ ಪುಳ್ಕೂರು ಸಿರಿಬಾಗಿಲು, ಶಿವನಾರಾಯಣ ವಾಟ್ಸಪ್ ಬಳಗ ಮುಂತಾದ ಸಂಸ್ಥೆಗಳು ಸಹಕಾರ ನೀಡಲಿರುವುದಾಘಿ ಪ್ರಕಟಣೆ ತಿಳಿಸಿದೆ.





