ಕಾಸರಗೋಡು: ಕೋಯಿಕ್ಕೋಡು ಸನಿಹದ ಕೊಯಿಲಾಂಡಿ ಬಸ್ ನಿಲ್ದಾಣ ಸನಿಹದ ಲಾಟರಿ ಸ್ಟಾಲಿನಿಂದ ಓಣಂ ಬಂಪರ್ ಟಿಕೆಟ್‍ಗಳನ್ನು ಕಳುವಗೈದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿ ನಿವಾಸಿ ಅಬ್ಬಾಸ್ (56)ಎಂಬಾತನನ್ನು ಅಲ್ಲಿನ ಪೊಲೀಸರುಬಂಧಿಸಿದ್ದಾರೆ.
ಕೊಯಿಲಾಂಡಿಯ ವಿ. ಕೆ. ಲಾಟರಿ ಸ್ಟಾಲಿನಿಂದ ಭಾನುವಾರ 57 ಓಣಂ ಬಂಪರ್ ಟಿಕೇಟುಗಳನ್ನು ಈತ ಕದ್ದೊಯ್ದಿದ್ದನು. ಟಿಕೆಟುಗಳ ಒಟ್ಟು ಮೌಲು 28,500ರೂ. ಆಘಿದೆ. ಲಾಟರಿ ಸ್ಟಾಲ್ ಮಾಲಿಕ ಮುಸ್ತಫ ನೀಡಿದ ದೂರಿನನ್ವಯ ಪೆÇೀಲೀಸರು ಸಿಸಿ ಟಿವಿ ಸಹಾಯದಿಂದ ಆರೋಪಿಯನ್ನು ಪತ್ತೆ ಮಾಡಿದರು. ಲಾಟರಿ ಸ್ಟಾಲ್ ಟಿಕೆಟ್ ಖರೀದಿಗಾಘಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಃಕರು ತುಂಬಿಕೊಂಡಿದ್ದ ಸಂದರ್ಭ ಟಿಕೆಟ್ ನಂಬರ್ ಪರಿಶೋಧಿಸುವ ನೆಪದಲ್ಲಿ ಬಂಡಲ್ ಕೈಗೆತ್ತಿ ಅದರಿಂದ ಕೆಲವು ಟಿಕೆಟ್ ಅಪಹರಿಸಿ ಬಂಡಲ್ ತೆಗೆದಲ್ಲೇ ಇರಿಸಿ ಪರಾರಿಯಾಗಿದ್ದನು.




