ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರದ ಟ್ರಕ್ ಪಾಕಿರ್ಂಗ್ ಏರಿಯಾದ ಸರ್ವೀಸ್ ರಸ್ತೆ ಬದಿಯಲ್ಲಿ ಗಾಂಜಾ ಗಿಡ ನೆಟ್ಟು ಬೆಳೆಸಿರುವುದನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಕುಂಬಳೆ ಅಬಕಾರಿ ರೇಂಜ್ ಇನ್ಸ್‍ಪೆಕ್ಟರ್ ಕೆ. ವಿ. ಶ್ರಾವಣ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದ್ದು, ಸುಮಾರು 90 ಸೆ. ಮೀ ಉದ್ದದ ಆರೋಗ್ಯವಂತ ಗಿಡಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಎನ್. ಡಿ. ಪಿ. ಸಿ ಕಾಯ್ದೆಯಂತೆ ಕೇಸು ದಾಖಲಿಸಿಕೊಂಡಿದ್ದಾರೆ. ಗಾಂಜಾ ಬೆಳೆಸಿದವರ ಬಗ್ಗೆ ಮಾಹಿತಿ ಲಭಿಸಿಲ್ಲ.
ಹೆದ್ದಾರಿ ಬದಿ ಅಂತರಾಜ್ಯ ಪರವಾನಿಗೆಯ ಟ್ರಕ್‍ಗಳು ಪಾರ್ಕ್ ನಡೆಸುತ್ತಿದ್ದು, ಚಾಲಕರು ವಿಶ್ರಾಂತಿ ಪಡೆಯುವ ಕಾರಣ, ಉತ್ತರ ಭಾರತದಿಂದ ಗಿಡ ತಂದು ನೆಟ್ಟಿರಬಹುದೆಂಬ ಸಂಶಯ ಮೂಡುವಂತೆ ಮಾಡುವ ನಿಟ್ಟಿನಲ್ಲಿ ಸ್ಥಳಿಯ ನಿವಾಸಿಗಳು ಗಾಂಜಾ ಬೆಳೆಸಿರುವ ಸಾಧ್ಯತೆಯಿರುವುದಾಗಿ ಮಾಃಇತಿಯಿದೆ. ತನಿಖೆಯ ಮೊದಲ ಹಂತದಲ್ಲಿ ಹೆದ್ದಾರಿ ವಿಭಾಗದ ಹಾಗೂ ಆಸುಪಾಸಿನ ಸಿಸಿಟಿವಿ ಫೂಟೇಜ್‍ಗಳನ್ನು ಪೊಲೀಸರು ಪರಿಶೋಧಿಸಲಾರಂಭಿಸಿದ್ದಾರೆ.





