ಉಪ್ಪಳ: ಶಾಲಾ ಕ್ರೀಡಾಕೂಟದ ಮಧ್ಯೆ ನಾಲ್ಕನೇ ತರಗತಿ ವಿದ್ಯಾರ್ಥಿ ಮೈದಾನದಲ್ಲಿ ಕುಸಿದು ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ನಡೆ ದಿದೆ. ಉಪ್ಪಳ ಮಂಗಲ್ಪಾಡಿ ಜಿ. ಬಿ ಎಲ್. ಪಿ ಶಾಲೆಯ ವಿದ್ಯಾರ್ಥಿ ಹಸನ್ ರಸಾ (10)ಮೃತಪಟ್ಟ ಬಾಲಕ. ಆಟೋಟ ಕ್ರೀಡಾ ಚಟುವಟಿಕೆ ಮಧ್ಯೆ ಕುಸಿದು ಬಿದ್ದು ಮರಣ ಸಂಭವಿಸಿದೆ. ಈತ ಇತರ ರಜ್ಯ ಕಾರ್ಮಿಕ ಉತ್ತರ ಪ್ರದೇಶದ ಮುರಷಿದಾಬಾದ್ ನಿವಾಸಿ, ಇನ್ಸಾಫಾಲಿ ಎಂಬವರ ಪುತ್ರನಾಗಿದ್ದಾನೆ.
ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಕ್ರೀಡಾಕೂಟದ ಮಧ್ಯೆ ಕುಸಿದು ಬಿದ್ದ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಉರಲಿಲ್ಲ. ಮೃತದೇಹ ಮಂಗಲ್ಪಾಡಿ ಸರ್ಕಾರಿ ಅಸ್ಪತ್ರೆಯಲ್ಲಿ ಶವಮಹಜರು ನಡೆಸಲಾಯಿತು. ಮಂಜೇಶ್ವರ ಠಾಣೆ ಪೊಲೀಸರು ಬಾಲಕನ ಅಸಹಜ ಸವಿನ ಬಗ್ಗೆ ಕೇಸು ದಾಖಲಿಸಿಕೊಂಡಿದ್ದಾರೆ.





