ಪೆರ್ಲ: ಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಣ್ಮಕಜೆ ಪಂಚಾಯಿತಿಯ ಬಜಕೂಡ್ಲು ಮಿನಿ ಸ್ಟೇಡಿಯಂನ ಅಭಿವೃದ್ಧಿ ಕಾಮಗಾರಿಗೂ ಮೊದಲು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜತೆ ಸಮಾಲೋಚನಾ ಸಭೆ ನಡೆಸಲಾಯಿತು.
ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅವರ ಪ್ರಯತ್ನದೊಂದಿಗೆ ಬಜಕೂಡ್ಲು ಮಿನಿ ಸ್ಟೇಡಿಯಂ ಅಭಿವೃದ್ಧಿಗಾಗಿ ಒಂದು ಕೋಟಿ ರಊ. ಮೀಸಲಿರಿಸಲಾಗಿದೆ. ಮೈದಾನದ ಅಭಿವೃದ್ಧಿಯನ್ನು ಯಾವ ರೀತಿ ನಡೆಸಬೇಕು ಮತ್ತು ಅಂದಾಜುಪಟ್ಟಿಯಲ್ಲಿ (ಎಸ್ಟಿಮೇಟ್) ಯಾವೆಲ್ಲ ಅಭಿವೃದ್ಧಿ ಕೆಲಸಗಳಿಗೆ ಅವಕಾಶ ನೀಡಬಹುದು ಎಂಬ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಸಭೆ ಆಯೋಜಿಸಲಾಗಿತ್ತು.
ಸರ್ಕಾರದ ಬೃಹತ್ ಮೊತ್ತದ ಅನುದಾನ ಬಳಸಿ ಸ್ಥಳೀಯ ಕ್ರೀಡಾಪಟುಗಳಿಗೆ ಅಗತ್ಯವಾದ ರೀತಿಯಲ್ಲಿ ಅಭಿವೃದ್ಧಿಯನ್ನು ನಡೆಸುವಂತೆ ಸೂಚಿಸಲಾಯಿತು. ಕ್ರೀಡಾಂಗಣದ ಕಾಮಗಾರಿಗೆ ಚಾಲನೆ
ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಮಂಜೇಶ್ವರ ವಿನೀಡುವ ಮೊದಲೇ ಸ್ಥಳೀಯ ಜನರನ್ನು, ಕ್ರೀಡಾಪಟುಗಳನ್ನು, ವಿವಿಧ ಕ್ಲಬ್ ಸೇರಿದಂತೆ ಕ್ರೀಡಾ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವಂತೆ ಸೂಚಿಸಲಾಗಿತ್ತು.
ಸಂಘಟನೆಗಳ ಆಗ್ರಹ:
ಬಜಕೂಡ್ಲು ಮಿನಿ ಸ್ಟೇಡಿಯಂ ಸೆವೆನ್ಸ್ ಕ್ರಿಕೆಟ್ ಪಂದ್ಯಾಟಕ್ಕೆ ಸೂಕ್ತವಾಗಿಲ್ಲ ಅಲ್ಲದೆ ಹಲವಾರು ನ್ಯೂನತೆಗಳನ್ನು ಹೊಂದಿರುವ ಬಗ್ಗೆ ಇಲ್ಲಿನ ಶ್ರೀಮಹಾಲಿಂಗೇಶ್ವರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದರು. ಹೊಸ ನಿರ್ಮಾಣ ಕಾಮಗಾರಿಯಲ್ಲಿ ಇವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಲಾಯಿತು.
ಪಂದ್ಯಾಟ ನಡೆಯುವ ವೇಳೆ ಮೈದಾನಕ್ಕೆ ಆಗಮಿಸುವ ಆಟಗಾರರ ವಾಹನಗಳನ್ನು ನಿಲುಗಡೆಗೊಳಿಸಲು ಸೂಕ್ತ ಪಾಕಿರ್ಂಗ್ ವ್ಯವಸ್ಥೆಗೆ ಇಲ್ಲಿ ಜಾಗವಿಲ್ಲ. ರಸ್ತೆಬದಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಬಜಕೂಡ್ಲಿನ ಗೋಶಾಲೆ, ಪಳ್ಳಕ್ಕಾನ, ಅಣ್ಣಾರಮೂಲೆ ಭಾಗಕ್ಕೆ ತೆರಳುವವರಿಗೆ ಹೆಚ್ಚಿನ ಸಮಸ್ಯೆ ಉಂಟಾಗುತ್ತಿರುವುದರಿಂದ ಪಾರ್ಕಿಂಗ್‍ಗೆ ಜಾಗ ಕಂಡುಕೊಳ್ಳುವಂತೆಯೂ ಆಗ್ರಹಿಸಲಾಯಿತು.
ಈಗಾಗಲೇ ಮಿನಿ ಸ್ಟೇಡಿಯಂನಲ್ಲಿ ಶೌಚಗೃಹ ಹಾಗೂ ನೀರಿಗಾಗಿ ಕೊಳವೆಬಾವಿ ನಿರ್ಮಿಸಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಹಣ ಮೀಸಲಿರಿಸದೆ ಈ ಮೊತ್ತ ಬದಲಿ ಕಾಂಗಾರಿಗೆ ಬಳಸುವಂತೆಯೂ ಸೂಚಿಸಲಾಯಿತು. ಇದಕ್ಕೆ ನೀರಿನ ಟ್ಯಾಂಕ್ ಮಾತ್ರ ಅಳವಡಿಸುವುದರ ಜತೆಗೆ ಶೌಚಗೃಹವನ್ನು ಅಭಿವೃದ್ಧಿಗೊಳಿಸುವುದು ಉತ್ತಮ. ಕ್ರಿಕೆಟ್ ಜತೆಗೆ ವಾಲಿಬಾಲ್, ಫುಟ್ಬಾಲ್ ಆಟಗಳಿಗೆ ಅಗತ್ಯವಿರುವ ಕಂಬಗಳ ಅಳವಡಿಕೆ, ಕಬಡ್ಡಿ ಆಟಕ್ಕೆ ಅನುಗುಣವಾದ ಮ್ಯಾಟ್ ವ್ಯವಸ್ಥೆ, ಪ್ಲಾಸ್ಟಿಕ್ ಹಾಗೂ ಇತರೆ ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವಂತೆಯೂ ಆಗ್ರಹಿಸಲಾಯಿತು. ಸುತ್ತು ಆವರಣ ಬೇಲಿ, ಎದುರು ಭಾಗದಲ್ಲಿ ಸುಸಜ್ಜಿತ ದ್ವಾರ, ಪ್ರೇಕ್ಷಕರ ಗ್ಯಾಲರಿ ಸೇರಿದಂತೆ ವಿವಿಧ ಕಾಮಗಾರಿ ನಡೆಯಲಿದೆ.






