ಕಾಸರಗೋಡು: ನಗರದ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ "ಶ್ರೀ ದುರ್ಗಾಂಬಾ ವೇದಿಕೆ" ಯಲ್ಲಿ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ-2025 ಕಾರ್ಯಕ್ರಮದ ಅಂಗವಾಗಿ ಸಾಹಿತ್ಯ ಕಾರ್ಯಕ್ರಮ ಸೆ. 24ರಂದು ಬೆಳಗ್ಗೆ 11ಕ್ಕೆ ಜರುಗಲಿದೆ.
ಈ ಸಂದರ್ಭ ಸಂಕೀರ್ತನಾಕಾರ, ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರ ಬಗ್ಗೆ ವ್ಯಕ್ತಿ ಚಿತ್ರಣ ಕೃತಿ ರಚಿಸಿದ ಸಾಹಿತಿ ಲೇಖಕ ರವಿ ನಾಯ್ಕಾಪು ಇವರಿಗೆ ಗೌರವಾಪರ್ಪಣೆ ನಡೆಯುವುದು. ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟಿಸುವರು. ಡಾ. ವಾಮನ ರಾವ್ ಬೇಕಲ್ ಅಧ್ಯಕ್ಷತೆ ವಹಿಸುವರು. ಪಾಂಗೋಡು ಪ್ರವೀಣ ನಾಯಕ ಗೌರ ಉಪಸ್ಥಿತರಿರುವರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್ ಗೌರವಬಾರ್ಪಣೆ ಸಲ್ಲಿಸುವರು. ಪ್ರೊ. ಎ.ಶ್ರೀನಾಥ್ ಪರಿಚಯ ಭಾಷಣ ಮಾಡುವರು.





