ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಾಮಗಾರಿ ನಡೆಯುತ್ತಿರುವ ಮೈಲಾಟಿಯ ಲೇಬರ್ ಕ್ಯಾಂಪಲ್ಲಿ ಕಾರ್ಮಿಕರ ಮಧ್ಯೆ ನಡೆದ ಘರ್ಷಣೆಯಲ್ಲಿ ಉತ್ತರ ಭಾರತದ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಯತಿವೀಂದರ್ ಸಿಂಗ್ ಮತ್ತು ಗುರ್ದಾಸಿಂಗ್ ಗಾಯಾಳುಗಳು, ಇವರಲ್ಲಿ ಒಬ್ಬನನ್ನು ಮಂಗಳೂರು ಹಾಗೂ ಇನ್ನೊಬ್ಬನನ್ನು ಕಾಞಂಗಾಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ತಂಡಗಳ ಮಧ್ಯೆ ವಾಗ್ವಾದ ನಡೆದಿದ್ದು, ನಂತರ ಇರಿತದಲ್ಲಿ ಕೊನೆಗೊಂಡಿದೆ. ಪ್ರಕರಣದ ಆರೋಪಿಗಳೆನ್ನಲಾದ ಪಂಜಾಬ್ ನಿವಾಸಿಗಳಾದ ರಂಜಿತ್ ಸಿಂಗ್ ಹಾಗೂ ಹಾರ್ಸಿಂ ರಂಜಿತ್ ಸಿಂಗ್ ತಲೆಮರೆಸಿಕೊಂಡಿದ್ದು, ಇವರ ಪತ್ತೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




