HEALTH TIPS

ಬಾಲಕಗೆ ಸಲಿಂಗ ಕಿರುಕುಳ-ಉಪಜಿಲ್ಲಾ ಶಿಕ್ಷಣಾಧಿಕಾರಿ ಬಂಧನ, ಸೇವೆಯಿಂದ ಅಮಾನತು: ಹತ್ತಕ್ಕೇರಿದ ಬಂಧಿತರ ಸಂಖ್ಯೆ- ತಲೆಮರೆಸಿಕೊಂಡಿರುವ ಮುಸ್ಲಿಂಲೀಗ್ ಮುಖಂಡನಿಗಾಗಿ ಮುಂದುವರಿದ ಶೋಧ

ಕಾಸರಗೋಡು: ಹದಿನಾರರ ಹರೆಯದ ಬಾಲಕಗೆ ಸಲಿಂಗ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ಚೆರ್ವತ್ತೂರು ಶೈಕ್ಷಣಿಕ ಉಪಜಿಲ್ಲಾ ಶಿಕ್ಷಣಾಧಿಕಾರಿ, ಪಡನ್ನ ನಿವಾಸಿ ಹಾಗೂಪಡನ್ನಕ್ಕಾಡಿನಲ್ಲಿ ವಾಸಿಸುತ್ತಿರುವ ವಿ.ಕೆ ಸೈನುದ್ದೀನ್ ಎಂಬಾತನನ್ನು ನೀಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಂಧನವಗುತ್ತಿದ್ದಂತೆ ಈತನನ್ನು ಉಪಜಿಲ್ಲಾ ಶಿಕ್ಷಣಾಧಿಕಾರಿ ಹುದ್ದೆಯಿಂದ ಜಿಲ್ಲಾ ಶಿಕ್ಷಣ ಉಪನಿರ್ದೇಶಕರು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ರಾಜ್ಯ ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಅವರ ನಿರ್ದೇಶ ಪ್ರಕಾರ ಅಮಾನತುಗೊಳಿಸಲಾಗಿದೆ.

ಆರೋಪಿಯನ್ನು ಪೋಕ್ಸೋ ಅನ್ವಯ ನ್ಯಾಯಾಂಗಬಂಧನ ವಿಧಿಸುತ್ತಿದ್ದಂತೆ ಈತನನ್ನು ಸೇವೆಯಿಮದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಇನ್ನೊಬ್ಬ ಆರೋಪಿ, ಪಯ್ಯನ್ನೂರಿನ ಫ್ಯಾಬ್ರಿಕೇಶನ್ ನೌಕರ ಗಿರೀಶ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಸಲಿಂಗ ಕಿರುಕುಳಕ್ಕೆ ಸಂಬಂಧಿಸಿ ಬಂಧಿತರಾದವರ ಸಂಖ್ಯೆ ಹತ್ತಕ್ಕೇರಿದೆ. ಪಡನ್ನಕ್ಕಾಡ್ ನಿವಾಸಿ ರಂಸಾನ್, ಪಿಲಿಕ್ಕೋಡ್ ಎರವು ನಿವಾಸಿ ಚಿತ್ರರಾಜ್, ವಳವಕ್ಕಾಡ್ ನಿವಾಸಿ ಕುಞಹಮ್ಮದ್, ಚಂದೇರದ ಅಬ್ದುಲ್ಲ, ತ್ರಿಕ್ಕರಿಪುರ ನಿವಾಸಿಗಳಾದ ನಾರಾಯಣನ್, ರಯೀಸ್, ವೆಳ್ಳಿಚ್ಚಾಲ್‍ನ ಸುಕೇಶ್, ಚೀಮೇನಿಯ ಶಿಜಿತ್ ಬಂಧಿತ ಇತರ ಆರೋಪಿಗಳು. 

ಪ್ರಕರಣದ ಇನ್ನೊಬ್ಬ ಆರೋಪಿ, ಮುಸ್ಲಿಂಲೀಗ್‍ನ ಪ್ರಾದೇಶಿಕ ನೇತಾರ, ತ್ರಿಕ್ಕರಿಪುರ ವಡಕ್ಕುಂಬಾಟ್ ನಿವಾಸಿ ಸಿರಾಜುದ್ದೀನ್ ತಲೆಮರೆಸಿಕೊಮಡಿದ್ದು, ಈತನ ಪತ್ತೆಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಇದೇ ಸಂದರ್ಭ ಅಪ್ಸಲ್ ಎಂಬಾತನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಮಡಿದ್ದಾರೆ. ಬೇರೊಬ್ಬ ವ್ಯಕ್ತಿಯೊಂದಿಗೆ ಸಹಕರಿಸುವಂತೆ ಬಾಲಕಗೆ ಒತ್ತಾಯಿಸಿರುವುದಕ್ಕೆ ಸಂಬಂಧಿಸಿ ಈತನ ವಿರುದ್ಧ ಕೇಸು ದಾಖಲಿಸಲಾಗಿದೆ.

ಇವರಲ್ಲಿ ಎಂಟು ಮಂದಿ ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯವರಾಗಿದ್ದರೆ, ಉಳಿದವರು ಕಣ್ಣೂರು, ಕೋಯಿಕ್ಕೋಡ್ ಹಾಗೂ ಎರ್ನಾಕುಳಂ ನಿವಾಸಿಗಳಾಗಿದ್ದಾರೆ. ಡೇಟಿಂಗ್ ಆ್ಯಪ್ ಬಳಸಿ, ಆರೋಪಿಗಳು ಬಾಲಕನನ್ನು ಪರಿಚಯಮಾಡಿಕೊಂಡು ಕಳೆದ ಎರಡು ವರ್ಷಗಳಿಂದ ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ. ಇತ್ತೀಚೆಗೆ ಬಾಲಕನ ಮನೆಗೆ ವ್ಯಕ್ತಿಯೊಬ್ಬ ಆಗಮಿಸಿದ್ದು, ಬಾಲಕನ ತಾಯಿಯನ್ನು ಕಂಡ ತಕ್ಷಣ ಆರೋಪಿ ಓಡಿ ಪರಾರಿಯಾಗಿದ್ದನು. ಈ ಬಗ್ಗೆ ಸಂಶಯಗೊಂಡ ತಾಯಿ ಚಂದೇರ ಠಾಣೆ ಪೊಲೀಸರಿಗೆ ದೂರು ನೀಡಿದಾಗ ವಿಷಯ ಬಹಿರಂಗಗೊಂಡಿತ್ತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries