ಕುಂಬಳೆ: ಮನೆಯೊಳಗಿಂದ ವಿದೇಶಿ ಮದ್ಯ ಹಾಗೂ ನಗದು ವಶಪಡಿಸಿಕೊಂಡ ಪ್ರಕರಣದ ಆರೋಪಿ, ಕುಂಬಳೆ ಕುಂಟಂಗೇರಡ್ಕ ನಿವಾಸಿ ಪ್ರಭಾಕರ ಯಾನೆ ಅಣ್ಣಿ ಪ್ರಭಾಕರ ಎಂಬಾತನನ್ನು ಕುಂಬಳೆ ಠಾಣೆ ಪೊಲೀಸರು ಸಾಹಸಕರ ರೀತಿಯಲ್ಲಿ ಬಂಧಿಸಿದ್ದಾರೆ.
ಮನೆಯೊಳಗೆ ಅನಧಿಕೃತವಾಗಿ ಮದ್ಯ ದಾಸ್ತಾನಿರಿಸಿಕೊಂಡಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಕುಂಬಳೆ ಠಾಣೆ ಇನ್ಸ್‍ಪೆಕ್ಟರ್ ವಿ.ಕೆ ಜಿಜಿಶ್ ನಿರ್ದೇಶ ಪ್ರಕಾರ ಎಸ್.ಐ ಕೆ. ಶ್ರಿಜೇಶ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದಾಗ, ಮನೆಯ ಗೋಡೆಯಲ್ಲಿ ಪ್ರತ್ಯೇಕವಾಗಿ ನಿರ್ಮಿಸಲಾಗಿದ್ದ ಕೋಶದಲ್ಲಿದ್ದ ಮದ್ಯ ಹಾಗೂ 32970ರೂ. ನಗದು ವಶಪಡಿಸಿಕೊಂಡಿದ್ದರು. ಪೊಲೀಸರು ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಪ್ರಭಾಕರ ಹಿಂಬಾಗಿಲಿಂದ ಓಡಿ, ಆವರಣಗೋಡೆ ಹಾರಿ ಪರಾರಿಯಾಗುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಹಿಂಬಾಲಿಸಿ ಸೆರೆ ಹಿಡಿದಿದ್ದಾರೆ.




