ಮುಂಬೈ: ಥಾಣೆ ಜಿಲ್ಲೆ ಸೇರಿದಂತೆ ಅನೇಕ ಕಡೆ ಭಾರಿ ಮಳೆ ಆಗಿದ್ದರಿಂದ ಪ್ರಯಾಣಿಕ ರೈಲು ಹಳ್ಳಿ ತಪ್ಪಿದೆ. ಇದರ ಪರಿಣಾಮ ಸರಕು ಸಾಗಣೆ ರೈಲುಗಳು ಸ್ಥಗಿತಗೊಂಡಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾದಲ್‌ಪುರ - ಅಂಬರ್‌ನಾಥ್ ಸಂಚರಿಸುವ ರೈಲು ತೀವ್ರ ಮಳೆಯಿಂದ ಹಳ್ಳಿ ತಪ್ಪಿದ್ದು, ಸಿಎಸ್‌ಎಂಟಿಗೆ ಹೋಗುವ ಮಾರ್ಗದಲ್ಲಿ ಸಿಲುಕಿಕೊಂಡಿವೆ.
ಸಹಾಯಕ ಎಂಜಿನ್ ಕಳುಹಿಸಿ ಅದನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.
ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನ ಲ್ಲಿ ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ.
ದಾದರ್, ಬೈಕುಲ್ಲಾ, ಕುರ್ಲಾ, ಸಿಯಾನ್ ರೈಲು ನಿಲ್ದಾಣದಲ್ಲಿ ಜಲಾವೃತ ಗೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.




