ಭಾರತೀಯ ವಾಹನ ತಯಾರಕರ ಸಂಘದ(ಸಿಯಾಮ್) ಮೂಲಕ ರವಾನಿಸಲಾಗಿರುವ ಸೂಚನೆಗಳಲ್ಲಿ ಪೋಸ್ಟರ್‌ಗಳು ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದೂ ಎಂಎಚ್‌ಐ ತಿಳಿಸಿದೆ. ಸರಕಾರಿ ಅಧಿಕಾರಿಗಳು ಮತ್ತು ಉದ್ಯಮದ ಹಿರಿಯ ಅಧಿಕಾರಿಗಳು business-standard.com ಸುದ್ದಿಸಂಸ್ಥೆಗೆ ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ.
ಆಟೊಮೊಬೈಲ್ ಕಂಪನಿಗಳು ಈಗ ಪೋಸ್ಟರ್‌ಗಳನ್ನು ವಿನ್ಯಾಸಗೊಳಿಸುತ್ತಿದ್ದು, ಪ್ರದರ್ಶನಕ್ಕೆ ಮುನ್ನ ಅನುಮೋದನೆಗಾಗಿ ಸಚಿವಾಲಯಕ್ಕೆ ಕಳುಹಿಸುತ್ತಿವೆ.
ಪೋಸ್ಟರ್‌ಗಳ ಮುದ್ರಣ ಮತ್ತು ವಿತರಣೆ ವೆಚ್ಚವನ್ನು ಕಂಪನಿಗಳು ಅಥವಾ ವಿತರಕರು ಭರಿಸುತ್ತಾರೆಯೇ ಅಥವಾ ಉಭಯತರು ಹಂಚಿಕೊಳ್ಳುತ್ತಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
ಡೀಲರ್‌ಶಿಪ್‌ಗಳ ಸ್ಥಳೀಯ ಭಾಷೆಯನ್ನು ಅವಲಂಬಿಸಿ ಪೋಸ್ಟರ್‌ಗಳು ಬದಲಾಗಬಹುದು ಎಂದು ಕಂಪನಿಯೊಂದರ ಹಿರಿಯ ಅಧಿಕಾರಿ ತಿಳಿಸಿದ್ದು,ಇದು ಇಂಗ್ಲಿಷ್ ಭಾಷೆಯಲ್ಲಿಯ ಮುಖ್ಯ ಆವೃತ್ತಿಯ ಜೊತೆಗೆ ಇತರ ಭಾಷೆಗಳ ಆವೃತ್ತಿಗೂ ಸಚಿವಾಲಯದಿಂದ ಪ್ರತ್ಯೇಕ ಅನುಮತಿಯ ಅಗತ್ಯವಿದೆಯೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ.
ಪೋಸ್ಟರ್‌ಗಳನ್ನು ಪ್ರದರ್ಶಿಸಲು ಆಟೋಮೊಬೈಲ್ ಉದ್ಯಮವು ಕನಿಷ್ಠ 20ರಿಂದ 30 ಕೋಟಿ ರೂ. ಗಳನ್ನು ವ್ಯಯಿಸಲಿದೆ. ಈ ವಾರದ ಅಂತ್ಯದೊಳಗೆ ಡೀಲರ್‌ಶಿಪ್‌ಗಳಲ್ಲಿ ಈ ಪೋಸ್ಟರ್‌ಗಳು ಕಾಣಿಸಿಕೊಳ್ಳಲಿವೆ ಎಂದು ಉದ್ಯಮದ ಇನ್ನೊಂದು ಮೂಲವು ತಿಳಿಸಿದೆ.
ಐಷಾರಾಮಿ ಕಾರು ಕಂಪನಿಗಳನ್ನು ಪೋಸ್ಟರ್ ಪ್ರದರ್ಶನ ಆದೇಶದಿಂದ ಹೊರಗಿರಿಸಲಾಗಿದೆ.
ಮಾರುತಿ ಸುಝುಕಿ, ಹುಂಡೈ, ಮಹಿಂದ್ರಾ ಆಯಂಡ್ ಮಹಿಂದ್ರಾ, ಟಾಟಾ ಮೋಟರ್ಸ್, ಟೊಯೋಟಾ ಮತ್ತು ಕಿಯಾದಂತಹ ಪ್ರಮುಖ ಕಾರು ತಯಾರಿಕೆ ಕಂಪನಿಗಳು ಜಿಎಸ್‌ಟಿ ಕಡಿತದ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ಈಗಾಗಲೇ ಪ್ರಕಟಿಸಿವೆ. ಜಿಎಸ್‌ಟಿ ಕಡಿತದಿಂದ ಎಲ್ಲ ಮಾಡೆಲ್‌ಗಳ ಕಾರುಗಳ ಬೆಲೆಗಳು ಇಳಿಕೆಯಾಗಿವೆ.




