ಮಂಜೇಶ್ವರ: ಮೀಂಜ ಪಂಚಾಯಿತಿಯ ಅಡ್ಕತ್ತಗುರಿಯಿಂದ ನಾಪತ್ತೆಯಾಗಿದ್ದ ಮಹಿಳೆ ಮೃತದೇಹ ಸನಿಹದ ಬಾವಿಯೊಂದರಲ್ಲಿ ಪತ್ತೆಯಾಗಿದೆ. ಇಲ್ಲಿನ ನಿವಾಸಿ ರೋಕಿ ಡಿ.ಸೋಜ ಅವರ ಪತ್ನಿ ಐರಿನಾ ಡಿ.ಸೋಜ(60)ಮೃತಪಟ್ಟ ಮಹಿಳೆ. ಸೆ. 4ರಂದು ಮನೆಯಿಂದ ನಾಪತ್ತೆಯಾಗಿದ್ದು, ಹುಡುಕಾಡುವ ಮಧ್ಯೆ ಬಾವಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಅಗ್ನಿಶಾಮಕ ದಳ ನೆರವಿನಿಂದ ಮೃತದೇಹ ಮೇಲಕ್ಕೆತ್ತಿ, ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಯಿತು. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.



