ಕಾಸರಗೋಡು: ವೆಳ್ಳರಿಕುಂಡು ಪನ್ನಿತ್ತಡ್ಕ ನಿವಾಸಿ, ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅರುಣ್ ರಾಂಕೃಷ್ಣನ್(34)ದೈಹಿಕ ಸಾಮಥ್ರ್ಯ ಪರೀಕ್ಷೆ ವೇಳೆ ಕುಸಿದು ಬಿದ್ದು ಮೃಥಪಟ್ಟಿದ್ದಾರೆ. ದೆಹಲಿಯಲ್ಲಿರುವ ಭಾರತೀಯ ಭೂಸೇನೆಯ ಪ್ರಧಾನ ಕಚೇರಿಯಲ್ಲಿ ಸಿಗ್ನಲ್ ರೆಜಿಮೆಂಟ್‍ನ ಹವಾಲ್ದಾರ್ ಆಗಿ ಸಏವೆ ಸಲ್ಲಿಸುತ್ತಿದ್ದ ಇವರು, ಬೆಟಾಲಿಯನ್ ಫಿಸಿಕಲ್ ಎಲಿಜಿಬಿಲಿಟಿ ಟೆಸ್ಟ್ ನಡೆಯುವ ಮಧ್ಯೆ ಕುಸಿದು ಬಿದ್ದಿದ್ದರು. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ತಿಂಗಳ ಹಿಂದೆಯಷ್ಟೆ ರಜೆಯಲ್ಲಿ ಊರಿಗೆ ಬಂದು ವಾಪಸಾಗಿದ್ದರು.




