ಉಪ್ಪಳ: ಸ್ಥಳೀಯಾಡಳಿತ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ನಾಡಿನ ಜನತೆಯ ಅಗ್ರಹ. ದೇಶದ ಪ್ರಗತಿಯಲ್ಲಿ ನಮ್ಮ ಗ್ರಾಮದ ಕೊಡುಗೆಗಳು ಅಗತ್ಯ. ಅದಕ್ಕಾಗಿ ಬಿಜೆಪಿ ಸ್ಥಳೀಯ ವಾರ್ಡ್‍ಗಳಲ್ಲಿ ಗೆಲ್ಲಬೇಕು. ಆಗ ದೇಶದ ಪ್ರಗತಿ ವಾರ್ಡ್ ಮಟ್ಟದಲ್ಲೂ ಕಾಣಬವುದು ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್ ಮಧು ಹೇಳಿದರು.
ಪೈವಳಿಕೆ ಪಂಚಾಯತಿ ಚೇರಾಲು ವಾರ್ಡ್ ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಕಾಂತ್ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಸಿ.ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ. ಕಯ್ಯಾರ್, ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ ಪಟ್ಲ, ಜಿಲ್ಲಾ ಕಾರ್ಯದರ್ಶಿ ಲೋಕೇಶ್, ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ., ವಾರ್ಡ್ ಸದಸ್ಯೆ ಪುಷ್ಪಲಕ್ಷ್ಮಿ, ಮಮತಾ ಉಪಸ್ಥಿತರಿದ್ದರು. ಸದಾಶಿವ ಚೇರಾಲು ಸ್ವಾಗತಿಸಿ, ಗಣೇಶ ಪ್ರಸಾದ್ ನಾಯ್ಕ್ ವಂದಿಸಿದರು.




.jpg)
.jpg)
