ಕುಂಬಳೆ: ಕುಂಬಳೆಗೆ ಸಮೀಪದ ಆಚೆಗೋಳಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮೀ ಪ್ರಯುಕ್ತ ಪಾರ್ಥಸಾರಥಿ ದೇವ ಯಕ್ಷಗಾನ ಸಂಘ ಆಚೆಗೋಳಿ ಇದರ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಸಹಸ್ರ ಕವಚ ಮೋಕ್ಷ ಎಂಬ ಯಕ್ಷಗಾನ ತಾಳಮದ್ದಳೆ ಭಾನುವಾರ ಜರಗಿತು.
ಭಾಗವತರಾಗಿ ಕಂಬಾರು ಕೇಶವ ಭಟ್ಟ, ಲಕ್ಷ್ಮೀಶ ಬೇಂಗ್ರೋಡಿ, ಹಿಮ್ಮೇಳದಲ್ಲಿ ರಾಜೇಂದ್ರಪ್ರಸಾದ್ ಪುಂಡಿಕಾಯಿ, ಹರಿಪ್ರಸಾದ ಪೊಟ್ನೋಟ, ಪಾತ್ರವರ್ಗದಲ್ಲಿ ಉದಯಶಂಕರ ಭಟ್ ಮಜಲು, ಗೋಪಾಲಕೃಷ್ಣ ನಾಯಕ್ ಸೂರಂಬೈಲು, ಸದಾಶಿವ ಗಟ್ಟಿ ನಾಯ್ಕಾಪು, ಪ್ರತಾಪ ಕುಂಬಳೆ, ಶಿವಾನಂದ ಕುಂಬಳೆ, ಸದಾಶಿವ ಮುಳಿಯಡ್ಕ, ಗುರುಮೂರ್ತಿ ನಾಯ್ಕಾಪು ಭಾಗವಹಿಸಿದರು. ಸಂಘದ ಅಧ್ಯಕ್ಷ ಅನಂತ ಗಟ್ಟಿ ಸಿದ್ದಿಬೈಲು ಸ್ವಾಗತಿಸಿ, ಕಾರ್ಯದರ್ಶಿ ನಾರಾಯಣ ಹೇರಳ ಮಾಸ್ತರ್ ವಂದಿಸಿದರು. ಪದಾಧಿಕಾರಿಗಳಾದ ಸುಬ್ರಾಯ ಗಟ್ಟಿ ಮುಳಿಯಡ್ಕ, ಸುಂದರ ಗಟ್ಟಿ ಮುಳಿಯಡ್ಕ, ಗೋಪಾಲಕೃಷ್ಣ ಕಾರಂತ ಅನಂತಪುರ, ಶ್ರೀಧರ ಟೈಲರ್ ಮೊದಲಾದವರು ಸಹಕರಿಸಿದರು.





